ಕಾರವಾರ:ಶಿವರಾತ್ರಿ ಹಿನ್ನೆಲೆ ಸಮುದ್ರದಲ್ಲಿ ಸ್ನಾನ ಮಾಡುವ ವೇಳೆ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಸಮುದ್ರದಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರು: ಗೋಕರ್ಣ ಜೀವರಕ್ಷಕ ಸಿಬ್ಬಂದಿಯಿಂದ ರಕ್ಷಣೆ
ಶಿವರಾತ್ರಿ ಹಿನ್ನೆಲೆ ಸಮುದ್ರದಲ್ಲಿ ಸ್ನಾನ ಮಾಡುವ ವೇಳೆ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಬೆಳಗಾವಿ ಮೂಲದ ಅಭಿಜಿತ್ ಸಾವಂತ್ (19), ಮಹೇಶ್ ಕೆ.ಎಸ್. (23) ಹಾಗೂ ಮದೇವ್ ಗಡಿಕರ್ (28) ಎಂಬ ಯುವಕರನ್ನು ರಕ್ಷಣೆ ಮಾಡಲಾಗಿದೆ. ಆತ್ಮಲಿಂಗ ದರ್ಶನಕ್ಕೂ ಮೊದಲು ಸಮುದ್ರ ಸ್ನಾನಕ್ಕೆ ತೆರಳಿದ್ದ ಈ ಮೂವರು ಅಲೆಗಳಿಗೆ ಸಿಲುಕಿ ಕೊಚ್ಚಿ ಹೊಗುತ್ತಿದ್ದರು. ಈ ವೇಳೆ ಹತ್ತಿರದಲ್ಲಿದ್ದವರು ಕೂಗಿಕೊಂಡಾಗ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ಮೋಹನ್ ಅಂಬಿಗ, ವಿಶ್ವಾಸ್ ಭಟ್, ಹರೀಶ್ ಹರಿಕಂತ್ರ ತಕ್ಷಣ ರಕ್ಷಣೆಗೆ ತೆರಳಿದ್ದಾರೆ.
ಓಂ ವಾಟರ್ ಸ್ಪೋರ್ಟ್ಸ್ ಅವರ ಜೆಟ್-ಸ್ಕಿ (ವಾಟರ್ ಬೈಕ್) ಮೂಲಕ ಮೂವರನ್ನು ರಕ್ಷಣೆ ಮಾಡಲಾಗಿದೆ. ಈ ವೇಳೆ ಸೂಪರ್ವೈಸರ್ ರವಿ ನಾಯ್ಕ ಮತ್ತು ಚಾಲಕ ರಮೇಶ್ ಪೂಜಾರಿ ಸಹಾಯ ಮಾಡಿದ್ದಾರೆ.