ಕರ್ನಾಟಕ

karnataka

ETV Bharat / jagte-raho

ವಿಷ ಸೇವಿಸಿ ಮೂವರ ಸಾವು : ಅನಾಥವಾದ ಮಕ್ಕಳು - ಚಿಕ್ಕಬಳ್ಳಾಪುರ ಆತ್ಮಹತ್ಯೆ ಸುದ್ದಿ

ವಿಷ ಸೇವಿಸಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊಂಡಾರೆಡ್ಡಿಪಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

Three Persons Suicide In Chikkaballapur
ವಿಷ ಸೇವಿಸಿ ಮೂವರ ಸಾವು

By

Published : Mar 15, 2020, 2:10 AM IST

Updated : Mar 15, 2020, 3:59 AM IST

ಚಿಕ್ಕಬಳ್ಳಾಪುರ : ಅನ್ನದಲ್ಲಿ ವಿಷ ಬೆರಸಿ ತಿಂದು ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊಂಡಾರೆಡ್ಡಿಪಳ್ಳಿ ಗ್ರಾಮದಲ್ಲಿ ನಡೆದಿದೆ.

ಗಂಗರಾಜು(35), ಶಿವಮ್ಮ (28), ಗಾಯತ್ರಿ (32) ಆತ್ಮಹತ್ಯೆಗೆ ಶರಣಾದವರು. ಗಾಯತ್ರಿ ಮತ್ತು ಶಿವಮ್ಮ ಇಬ್ಬರು ಸಹೋದರಿರು, ಗಾಯತ್ರಿ ಬಾಗೇಪಲ್ಲಿಯ ತುಮ್ಮಕುಂಟಹಳ್ಳಿ ಗ್ರಾಮ ವೆಂಕಟೇಶ್ ಎಂಬುವರನ್ನು ಮದುವೆಯಾಗಿದ್ದಳು. ಈಕೆಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ವಿಷ ಸೇವಿಸಿ ಮೂವರ ಸಾವು

ಗಾಯತ್ರಿ, ಶಿವಮ್ಮ, ಗಾಯತ್ರಿ ಮಕ್ಕಳು ಹಾಗೂ ಗಂಗರಾಜು ಸೇರಿ ಕದ್ರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ವಾಪಸ್ಸಾಗಿ ಬಾಗೇಪಲ್ಲಿಯ ಟಿಬಿ ಕ್ರಾಸ್​ ಬಳಿ ಇಳಿದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮ್ಮನ ಮಕ್ಕಳು ಸ್ಥಳದಿಂದ ಹೋಡಿ ಹೋಗಿ ಸ್ಥಳೀಯರಿಂದ ಮೊಬೈಲ್​ ಪಡೆದು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಆತ್ಮಹತ್ಯೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗುತ್ತಿದೆ.

Last Updated : Mar 15, 2020, 3:59 AM IST

ABOUT THE AUTHOR

...view details