ಬೀದರ್: ರಾಜ್ಯದ ಗಡಿ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ತೆಲಂಗಾಣ ಮೂಲದ ಜಾಲವೊಂದನ್ನು ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 4.25 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಔರಾದ್ ತಾಲೂಕಿನ ಚಿಂತಾಕಿ- ಕಂಗಟಿ ರಸ್ತೆಯಲ್ಲಿ 35 ಕೆ.ಜಿ ಗಾಂಜಾ ಇರಿಸಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ತೆಲಂಗಾಣ ಮೂಲದ ಪರಶುರಾಮ್ ಜಾಧವ್, ಅಶೋಕ್ ರಾಠೋಡ್ ಹಾಗೂ ನಾಮದೇವ್ ಜಾಧವ್ ಎಂಬುವವರನ್ನು ಬಂಧಿಸಲಾಗಿದೆ.