ಕರ್ನಾಟಕ

karnataka

ETV Bharat / jagte-raho

ಎರಡು ಬೈಕ್​ಗಳ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು, ಇಬ್ಬರು ಗಂಭೀರ - Three killed

ಬಳ್ಳಾರಿ ಜಿಲ್ಲೆಯ ಕುಡಿತಿನಿ‌ ಸಮೀಪದ ತಿಮ್ಮಾಲಾಪುರದ ಕೆಪಿಸಿಎಲ್ ಗೇಟ್ ಬಳಿ ನಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

A collision between two bikes: 3 died in Ballary
ಎರಡು ಬೈಕ್​​ಗಳ ಮುಖಾಮುಖಿ ಡಿಕ್ಕಿ

By

Published : Feb 6, 2020, 9:01 PM IST

ಬಳ್ಳಾರಿ:ಜಿಲ್ಲೆಯ ಕುಡಿತಿನಿ‌ ಸಮೀಪದ ತಿಮ್ಮಾಲಾಪುರದ ಕೆಪಿಸಿಎಲ್ ಗೇಟ್ ಬಳಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಿಮ್ಮಾಲಾಪುರ ಗ್ರಾಮದ ರಾಮಕುಮಾರ (19), ಕುಡಿತಿನಿ ಪಟ್ಟಣದ ರಾಮಾಂಜಿನಿ (16) ಹಾಗೂ ಮೆಟ್ರಿ ಗ್ರಾಮದ ಗುರುಮೂರ್ತಿ (35) ಮೃತರೆಂದು ಗುರುತಿಸಲಾಗಿದೆ.

ಗುರುಮೂರ್ತಿ ತಿಮ್ಮಲಾಪುರದಿಂದ ಕುಡಿತಿನಿ ಕಡೆಗೆ, ರಾಮಕುಮಾರ್ ಮತ್ತು ರಾಮಾಂಜಿನಿ ಕುಡಿತಿನಿಯಿಂದ‌ ತಿಮ್ಮಲಾಪುರಕ್ಕೆ ತೆರಳುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಎರಡು ಬೈಕ್​​ಗಳ ಸವಾರರು ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

ಮೃತಪಟ್ಟ ರಾಮಕುಮಾರ ಬೈಕ್‌ನಲ್ಲಿದ್ದ ಯಲ್ಲಪ್ಪ ಹಾಗೂ ಗುರುಮೂರ್ತಿ ಬೈಕ್​​​ನಲ್ಲಿದ್ದ ಹಿಂಬದಿ ಸವಾರರಾದ ತಿಮ್ಲಾಪುರದ ಶಿವಕುಮಾರ, ತಿಮ್ಮಪ್ಪ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕುಡಿತಿನಿ ಪೊಲೀಸ್‌ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ABOUT THE AUTHOR

...view details