ಸಿರೋಹಿ (ರಾಜಸ್ಥಾನ): ಎರಡು ಕಾರುಗಳು ಡಿಕ್ಕಿಯಾದ ಪರಿಣಾಮ ತಾಯಿ-ಮಗ ಸೇರಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ಕಾರುಗಳು ಮುಖಾಮುಖಿ ಡಿಕ್ಕಿ: ತಾಯಿ-ಮಗ ಸೇರಿ ಸ್ಥಳದಲ್ಲೇ ಮೂವರ ದುರ್ಮರಣ - ರಸ್ತೆ ಅಪಘಾತ
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಎದುರು ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾರುಗಳು ಮುಖಾಮುಖಿ
ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ
ಉತ್ತರ ಪ್ರದೇಶದ ಮಥುರಾದಿಂದ ರಾಜ್‌ಕೋಟ್‌ಗೆ ಹೋಗುತ್ತಿದ್ದ ಕಾರು ಚಂದ್ರವತಿ ಹೆದ್ದಾರಿ ಬಳಿ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಅಬುರೋಡ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.