ಲಿಂಗಸೂಗೂರು: ತಾಲೂಕಿನ ದೇವರಭೂಪೂರು ಗ್ರಾಮದ ವಾಲ್ಮೀಕಿ ಸರ್ಕಲ್ ಬಳಿ ಐಪಿಎಲ್ ಬೆಟ್ಟಿಂಗ್ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಲಿಂಗಸೂಗೂರು ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ದೇವಭೂಪೂರ ಗ್ರಾಮದ ಚನ್ನಬಸವ ಯರಡೋಣಿ, ರಮೇಶ ಭಜಂತ್ರಿ, ಅಂಬಣ್ಣ ಭಜಂತ್ರಿ ಬಂಧಿತ ಆರೋಪಿಗಳು. ಇವರಿಂದ ಒಂದು ಮೊಬೈಲ್ ಮತ್ತು 4,300 ರೂಪಾಯಿ ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.