ಬೀದರ್:ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಹೊರ ವಲಯದಲ್ಲಿ ನಡೆದಿದೆ.
ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ: ಆರೋಪಿಗಳ ಬಂಧನ ಬಸವಕಲ್ಯಾಣ ಎಪಿಎಂಸಿ ಮಾಜಿ ಅಧ್ಯಕ್ಷ ಹಾರಕೂಡ ಗ್ರಾಮದ ನಿವಾಸಿ ಸಿದ್ರಾಮ ಗುದಗೆ, ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಮಲ್ಲಿಕಾರ್ಜುನ ಸಗರ ಮತ್ತು ಮಹಾರಾಷ್ಟ್ರದ ಪೂನಾ ಮೂಲದ ಛಾಯಾ ಬಾಳು ಭೋಸಲೆ ಬಂಧಿತ ಆರೋಪಿಗಳು.
ಓದಿ: ನಂದಿ ಬೆಟ್ಟದ ತಪ್ಪಲಿನಲ್ಲಿ ಇಸ್ಪೀಟ್ ದಂಧೆ: ಪೊಲೀಸರ ದಾಳಿ, 24 ಜೂಜುಕೋರರ ಬಂಧನ
ಸಸ್ತಾಪೂರ ಬಂಗ್ಲಾ ಸಮೀಪದ ಜಮೀನಿನಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸಲೆಂದು ಗಾಂಜಾ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ, 36 ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿದ 5.04 ಲಕ್ಷ ರೂ. ಮೌಲ್ಯದ 72 ಕೆಜಿ ಗಾಂಜಾ ಹಾಗೂ 1 ಕಾರನ್ನು ಜಪ್ತಿ ಮಾಡಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.