ಶಿವಮೊಗ್ಗ:ನಗರದಲ್ಲಿ ಬೈಕ್ ಮತ್ತು ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಎಲ್. ಬಿ. ಎಸ್ ನಗರದ ನಿವಾಸಿ ಪ್ರಶಾಂತ್ (19) ಹಾಗೂ ಬೊಮ್ಮನಕಟ್ಟೆ ನಿವಾಸಿ ದರ್ಶನ್(18) ಬಂಧಿತ ಆರೋಪಿಗಳು.
ಶಿವಮೊಗ್ಗ:ನಗರದಲ್ಲಿ ಬೈಕ್ ಮತ್ತು ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಎಲ್. ಬಿ. ಎಸ್ ನಗರದ ನಿವಾಸಿ ಪ್ರಶಾಂತ್ (19) ಹಾಗೂ ಬೊಮ್ಮನಕಟ್ಟೆ ನಿವಾಸಿ ದರ್ಶನ್(18) ಬಂಧಿತ ಆರೋಪಿಗಳು.
ಪ್ರಶಾಂತ್ ದಾರಿಯಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಬೆದರಿಸಿ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಈತನಿಂದ ಒಂದು ಸ್ಮಾರ್ಟ್ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಅದೇ ರೀತಿ 3 ಬೈಕ್ಗಳನ್ನು ಕದ್ದಿದ್ದ ದರ್ಶನ್ ಅವರನ್ನು ಬಂಧಿಸಲಾಗಿದೆ. ಈತನಿಂದ ಆ ಮೂರು ಬೈಕ್ಗಳನ್ನು ವಶಕ್ಕೆ ಪಡೆಯಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.