ಬೆಂಗಳೂರು/ಆನೇಕಲ್: ತಾಲೂಕಿನ ಹೊರವಲಯದ ಕರ್ನಾಟಕ ಗಡಿಭಾಗ ಅತ್ತಿಬೆಲೆಯ ಎಸ್ ಮಡಿವಾಳದಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.
ಆನೇಕಲ್ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಮೊಬೈಲ್, ನಗದು ದೋಚಿ ಖದೀಮರು ಪರಾರಿ - ಬೆಂಗಳೂರಿನ ಅತ್ತಿಬೆಲೆ ಪೊಲೀಸ್ ಠಾಣೆ
ಒಂದೆಡೆ ಕೊರೊನಾ ಸಂಕಷ್ಟ ಮತ್ತೊಂದೆಡೆ ಕಳ್ಳ ಖದೀಮರ ಪುಂಡಾಟ ಜೋರಾಗಿದ್ದು, ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮೊಬೈಲ್ ನಗದು ದೋಚಿದ್ದಾರೆ.
![ಆನೇಕಲ್ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಮೊಬೈಲ್, ನಗದು ದೋಚಿ ಖದೀಮರು ಪರಾರಿ gdgf](https://etvbharatimages.akamaized.net/etvbharat/prod-images/768-512-6920565-thumbnail-3x2-vish.jpg)
ಮೊಬೈಲ್,ನಗದು ದೋಚಿ ಖದೀಮರು ಪರಾರಿ
ಅಸ್ಸೋಂ ಮೂಲದ ಬದ್ರೂಮ್ ಇಸ್ಲಾಂ ಎಂಬಾತನ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಮೊಬೈಲ್ ಹಾಗೂ 10000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಮೂವರು ಖದೀಮರಿಂದ ಈ ಕೃತ್ಯ ನಡೆದಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.