ಬಳ್ಳಾರಿ:ಪಾನದ ಮತ್ತಿನಲ್ಲಿದ್ದ ತಂದೆಯೊಬ್ಬ ಕೈ-ಕಾಲನ್ನು ಕಟ್ಟಿ ಕಾಲುವೆಗೆ ಎಸೆದಿದ್ದ ಹದಿಹರೆಯದ ಮಗಳ ಮೃತದೇಹ ಇಂದು ಪತ್ತೆಯಾಗಿದೆ.
ಕೈ-ಕಾಲು ಕಟ್ಟಿ ಮಗಳನ್ನೇ ಕಾಲುವೆಗೆ ಎಸದಿದ್ದ ತಂದೆ: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ - ಆಂಧ್ರದ ಬೊಮ್ಮನಹಾಳು ಗ್ರಾಮದಲ್ಲಿ ಯುವತಿ ಮೃತದೇಹ ಪತ್ತೆ
ಪಾನದ ಮತ್ತಿನಲ್ಲಿದ್ದ ತಂದೆಯೊಬ್ಬ ಕೈ-ಕಾಲನ್ನು ಕಟ್ಟಿ ಕಾಲುವೆಗೆ ಎಸೆದಿದ್ದ ಹದಿಹರೆಯದ ಮಗಳ ಮೃತದೇಹ ಇಂದು ಪತ್ತೆಯಾಗಿದೆ.

ಎರಡು ದಿನಗಳ ಹಿಂದೆ ತಂದೆ ಮಗಳ ಕೈ ಕಾಲು ಕಟ್ಟಿ ಕಾಲುವುಗೆ ಎಸೆದಿದ್ದನಂತೆ. ಗೃಹರಕ್ಷಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಇಂದು ನೆರೆಯ ಆಂಧ್ರ ಪ್ರದೇಶದ ಬೊಮ್ಮನಹಾಳು ಬಳಿ ಇರುವ ಕಾಲುವೆಯಲ್ಲಿ ಯುವತಿಯ ಮೃತದೇಹ ಸಿಕ್ಕಿದೆ. ಕೆಂಪು ಬಣ್ಣದ ಜುಬ್ಬಾ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ವಿವರ: ಕುಡಿದ ಮತ್ತಿನಲ್ಲಿದ್ದ ಆಟೋ ಸೂರಿ ಎಂಬಾತ ತನ್ನ ಮಗಳನ್ನು ಬಳ್ಳಾರಿಯ ಬಂಡಿಹಟ್ಟಿ ಪ್ರದೇಶ ವ್ಯಾಪ್ತಿಯ ಹೆಚ್ಎಲ್ಸಿ ಕಾಲುವೆಯಲ್ಲಿ ಕೈ-ಕಾಲು ಕಟ್ಟಿ ಎಸೆದಿದ್ದನಂತೆ. ಮದ್ಯ ಸೇವನೆಗೆ ಹಣ ನೀಡದ ಕಾರಣ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
TAGGED:
ಯುವತಿ ಮೃತದೇಹ ಪತ್ತೆ