ಕರ್ನಾಟಕ

karnataka

ETV Bharat / jagte-raho

21 ವರ್ಷದ ಮಹಿಳೆ, ಮೂವರು ಮಕ್ಕಳು ನೇಣಿಗೆ ಶರಣು... ಹತ್ಯೆ ಮಾಡಿರುವ ಶಂಕೆ! - ಕ್ರೈಂ ಸುದ್ದಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ 21 ವರ್ಷದ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ನೇಣಿಗೆ ಶರಣಾಗಿರುವ ಘಟನೆ ನಡೆದಿದ್ದು, ಪ್ರಕರಣದ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.

ಮಹಿಳೆ, ಮಕ್ಕಳು ಆತ್ಮಹತ್ಯೆ

By

Published : Oct 7, 2019, 7:59 PM IST

ಸಾಗರ(ಮಧ್ಯಪ್ರದೇಶ):ಮನೆಯೊಂದರ ಕೋಣೆಯೊಳಗೆ 21 ವರ್ಷದ ಮಹಿಳೆ ಹಾಗೂ ಮೂವರು ಮಕ್ಕಳು ನೇಣಿಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಮತ್ತೊಂದೆಡೆ ಪ್ರಕರಣದ ಸುತ್ತ ಹತ್ಯೆ ಶಂಕೆಯೂ ವ್ಯಕ್ತವಾಗಿದೆ.

21 ವರ್ಷದ ಕುಂಟ್​ ಬಾಯ್​, ಆಕೆಯ ಮಕ್ಕಳಾದ ಪುಷ್ಪೇಂದ್ರ(5), ಎರಡೂವರೆ ವರ್ಷದ ಹರ್ಷಿತಾ ಹಾಗೂ ಒಂದೂವರೆ ವರ್ಷದ ಅಂಕಿತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಂಡ ಹರಿ ಸಿಂಗ್​ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಪ್ರಕರಣ ದಾಖಲಾಗಿದೆ.

ಹೊರಗಡೆ ಹೋಗಿದ್ದ ಗಂಡ ಮನೆಗೆ ಬಂದಾಗ ಮನೆ ಬಾಗಿಲು ಒಳಗಿನಿಂದ ಲಾಕ್​ ಆಗಿದ್ದು, ಬಾಗಿಲು ಒಡೆದು ಒಳಗೆ ಹೋದಾಗ ಎಲ್ಲರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇನ್ನ ಘಟನೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಯಾರಾದ್ರೂ ಕೊಲೆ ಮಾಡಿ ಈ ರೀತಿಯಾಗಿ ನೇಣು ಹಾಕಿರಬಹುದು ಎಂದು ತಿಳಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details