ಗಾಜಿಯಾಬಾದ್: ಸ್ಮಶಾನವೊಂದರ ಆವರಣದ ಗೋಡೆ ಕುಸಿದು 18 ಮಂದಿ ಮೃತಪಟ್ಟಿರುವ ಘಟನೆ ದೆಹಲಿ-ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಯಾಬಾದ್ನಲ್ಲಿ ನಡೆದಿದೆ.
ಸ್ಮಶಾನದ ಕಾಂಪೌಂಡ್ ಕುಸಿತ: 18 ಜನರ ದುರ್ಮರಣ, ಅವಶೇಷದಡಿ ಹಲವು ಮಂದಿ - ಸ್ಮಶಾನವೊಂದರ ಆವರಣದ ಗೋಡೆ ಕುಸಿತ
गाजियाबाद के मुरादनगर थाना क्षेत्र में बंबा रोड पर श्मशान घाट परिसर में गैलरी की छत गिर गई. जिसमें करीब दर्जनों लोगों की दबे होने की सूचना है. वहीं पांच लोगों की मौत हो चुकी है.
14:23 January 03
ದೆಹಲಿ-ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಯಾಬಾದ್ನಲ್ಲಿನ ಸ್ಮಶಾನವೊಂದರ ಆವರಣದ ಗೋಡೆ ಕುಸಿದು 18 ಮಂದಿ ಸಾವನ್ನಪ್ಪಿದ್ದು, 38 ಜನರನ್ನು ರಕ್ಷಿಸಲಾಗಿದೆ.
ಗಾಜಿಯಾಬಾದ್‌ನ ಮುರಾದ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಂಬಾ ರಸ್ತೆಯಲ್ಲಿರುವ ಸ್ಮಶಾನಕ್ಕೆ ಅಂತ್ಯಸಂಸ್ಕಾರಕ್ಕೆಂದು ಜನರ ಗುಂಪು ಬಂದಿದ್ದ ವೇಳೆ ಅವಘಡ ನಡೆದಿದೆ.
ಇನ್ನೂ ಹಲವರು ಅವಶೇಷದಡಿ ಸಿಲುಕಿದ್ದು, ಎನ್ಡಿಆರ್ಎಫ್ ತಂಡದೊಂದಿಗೆ ಸ್ಥಳೀಯರು ಹಾಗೂ ಪೊಲೀಸರು ಕೈಜೋಡಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 38 ಜನರನ್ನು ರಕ್ಷಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.