ಕರ್ನಾಟಕ

karnataka

ETV Bharat / jagte-raho

ಎಟಿಎಂನಲ್ಲಿ ಒಡೆಯುತ್ತಿದ್ದ ಕಳ್ಳರನ್ನು ರೆಡ್​​​ಹ್ಯಾಡ್ ಆಗಿ ಹಿಡಿದ ಮ್ಯಾನೇಜರ್ - money Theft in ATM

ಎಟಿಎಂ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರಿಬ್ಬರು ಬ್ಯಾಂಕ್ ಮ್ಯಾನೇಜರ್​​ಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

The thieves trapped as a red hand
ಎಟಿಎಂನಲ್ಲಿ ಹಣ ದೋಚುತ್ತಿದ್ದ ಕಳ್ಳರು

By

Published : Dec 18, 2019, 6:09 PM IST

ಚಿಕ್ಕಬಳ್ಳಾಪುರ:ಎಟಿಎಂ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಕಳ್ಳರಿಬ್ಬರು ಬ್ಯಾಂಕ್ ಮ್ಯಾನೇಜರ್​​ ಕೈಗೆ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್​​ನಲ್ಲಿ ಈ ಘಟನೆ ನಡೆದಿದೆ.

ಕಳೆದ ರಾತ್ರಿ 10.30ರ ಸುಮಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ನುಗ್ಗಿದ ಕಳ್ಳರು, ಸಿಸಿ ಟಿ.ವಿ ಧ್ವಂಸಗೊಳಿಸಿ ಹಣ ದೋಚಲು ಯತ್ನಿಸಿದರು. ಆದರೆ, ಕಳ್ಳರ ಕರಾಮತ್ತನ್ನು ಹೈದರಾಬಾದ್​​ ಮ್ಯಾನಿಟರಿಂಗ್ ಡಿಪಾರ್ಟ್‌ಮೆಂಟ್‌ಗೆ ತಿಳಿದಿದ್ದು, ಕೂಡಲೇ ಸ್ಥಳೀಯ ಮ್ಯಾನೆಜರ್ ಸೌರಬ್ ಸಿನ್ಹಾ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಮ್ಯಾನೇಜರ್​​​ ಎಟಿಎಂ ಬಳಿಗೆ ಧಾವಿಸಿದರು. ಮಾಸ್ಕ್ ಧರಿಸಿ ಎಟಿಎಂ ಹೊಡೆಯುತ್ತಿದ್ದ, ಕಳ್ಳರನ್ನು ಸ್ಥಳೀಯರ ನೆರವಿನಿಂದ ಹಿಡಿದುಕೊಂಡರು. ಆರೋಪಿಗಳನ್ನು ಬೆಂಗಳೂರು ಮೂಲದ ಮಹಮದ್ ಇರ್ಫಾನ್​ ಖಾನ್ ಹಾಗೂ ಶಬಾಜ್ ಖಾನ್ ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details