ಕರ್ನಾಟಕ

karnataka

ETV Bharat / jagte-raho

ಕಾಂಡೋಮ್​ ಬಳಸಿ ಎಂದಿದ್ದೇ ತಪ್ಪಾಯ್ತ? ಮುಂದೆ ಆಗಿದ್ದೇ ಬೇರೆ! - Bangalore crime news'

ಸುರಕ್ಷಿತ ಲೈಗಿಂಕ ಕ್ರಿಯೆಗೆ ಮಹಿಳೆ ಒತ್ತಾಯಿಸಿದಕ್ಕೆ ಒಪ್ಪದೇ ಗಲಾಟೆ ಮಾಡಿ ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

accused arrest
ಬಂಧಿತ ಆರೋಪಿ

By

Published : Jan 23, 2020, 3:36 PM IST

Updated : Jan 23, 2020, 3:47 PM IST

ಬೆಂಗಳೂರು:ಸುರಕ್ಷಿತ ಲೈಗಿಂಕ ಕ್ರಿಯೆಗೆ ಮಹಿಳೆ ಒತ್ತಾಯಿಸಿದಕ್ಕೆ ಒಪ್ಪದೇ ಗಲಾಟೆ ಮಾಡಿ ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚನಹಳ್ಳಿಯ ಮುಕುಂದ್​​ (48) ಬಂಧಿತ. ಮಂಜುಳಾ (42) ಕೊಲೆಯಾದ ಮಹಿಳೆ. ಜ.11ರಂದು ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಂಜುಳಾ ಕೊಲೆಯಾಗಿತ್ತು. ಒಂಟಿಯಾಗಿ ವಾಸವಿದ್ದ ಆಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂಬ ಶಂಕೆಯ ಮೇರೆಗೆ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಬಳಿಕ ತನಿಖೆಯಲ್ಲಿ ಅಸಲಿಯತ್ತು ಬೆಳಕಿಗೆ ಬಂದಿದೆ. ಮಂಜುಳಾ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗನ ಜೊತೆ ವಾಸವಿದ್ದಳು. ಆದರೆ, ಒಂಟಿ ಜೀವನ ಬೇಸತ್ತು ಮತ್ತು ಹೊಟ್ಟೆಪಾಡಿಗಾಗಿ ಪರ ಪುರುಷರ ಸಹವಾಸ ಹೊಂದುತ್ತಿದ್ದಳು. ಅದಕ್ಕಾಗಿ ಮೆಜೆಸ್ಟಿಕ್​ನಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದಳು.

ಆರೋಪಿಯನ್ನು ಬಂಧಿಸಿರುವ ಪೊಲೀಸರು

ಹೀಗಾಗಿ ಜ.11ರಂದು ಆರೋಪಿ ಮುಕುಂದ್​ನನ್ನು ಪರಿಚಯಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಮುಕುಂದ್​ ಕಾಂಡೋಮ್ ಬಳಸದೇ ಲೈಗಿಂಕ ಸಂಪರ್ಕಕ್ಕೆ ಮುಂದಾಗಿದ್ದಾನೆ, ಆಗ ಮಂಜುಳಾ ಕಾಂಡೋಮ್​ ಬಳಸಿ ಎಂದು ಹೇಳಿದ್ದಳಂತೆ. ಆದರೆ ಇದರಿಂದ ಕುಪಿತನಾದ ಮುಕುಂದ್​​ ನಿನಗೆ ನಾನು 1,500 ರೂಪಾಯಿ ಕೊಟ್ಟು ಬಂದಿದ್ದೇನೆ. ಹೇಳಿದ ಹಾಗೆ ಕೇಳಬೇಕು ಎಂದು ಬಲವಂತ ಲೈಂಗಿಕ ಕ್ರಿಯೆಗೆ ಪ್ರಯತ್ನಿಸಿದ. ಆಗ ಆಕೆ ಜೋರಾಗಿ ಕಿರುಚಿದ್ದಾಳೆ.

ಇದಕ್ಕೆ ಹೆದರಿದ ಮುಕುಂದ್​ ಮನೆಯಲ್ಲಿದ್ದ ಚಾಕುವಿನಿಂದ ಆಕೆ ಕತ್ತು ಕೊಯ್ದಿದ್ದಾನೆ. ಬಳಿಕ ಕತ್ತಿನಲ್ಲಿದ್ದ ಸರ, ಆಕೆ ಬಳಿಯಿದ್ದ ನಗದು, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸಿಸಿ.ಟಿ.ವಿ ಪರಿಶೀಲಿಸಿದಾಗ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ. ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆದಿದಾಗ ತಪ್ಪೊಪ್ಪಿಕೊಂಡಿದ್ದಾನೆ‌. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಿ-4 ಗ್ರೂಪ್​​ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

Last Updated : Jan 23, 2020, 3:47 PM IST

ABOUT THE AUTHOR

...view details