ವಿಜಯಪುರ: ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ವ್ಯಕ್ತಿವೋರ್ವನ ಹತ್ಯೆಯಾಗಿದೆ.
ಇಂಡಿಯಲ್ಲಿ ವ್ಯಕ್ತಿ ಕೊಲೆಗೈದು ಆರೋಪಿಗಳು ಪರಾರಿ - vijayapur crime news
ಇಂಡಿ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ವ್ಯಕ್ತಿವೋರ್ವನನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ವ್ಯಕ್ತಿ ಕೊಲೆ
ಯಾವುದೇ ಮಾರಕಾಸ್ತ್ರ ಅಥವಾ ವಸ್ತುವನ್ನು ಬಳಸದೇ ಕೈಗಳಿಂದಲೇ ಹೊಡೆದು ಹತ್ಯೆ ಮಾಡಿದ್ದಾರೆ. ಹೇಮಂತ ಕುಮಾರ್ (40) ಕೊಲೆಗೀಡಾಗಿರುವ ವ್ಯಕ್ತಿ. ಐದು ಜನರಿದ್ದ ತಂಡವು ಕೊಲೆಗೈದು ಪರಾರಿಯಾಗಿದೆ.
ಪೀರಪ್ಪ ತೆಗ್ಗಳ್ಳಿ, ಸಿದ್ದಪ್ಪ ಮದರಿ, ಮುತ್ತಪ್ಪ ಮದರಿ, ಲಕ್ಕವ್ವ ತೆಗ್ಗಳ್ಳಿ, ಶಾಂತವ್ವ ಮದರಿ ಕೊಲೆ ಆರೋಪಿಗಳು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.