ಕರ್ನಾಟಕ

karnataka

ETV Bharat / jagte-raho

15 ಲಕ್ಷ ರೂ. ದರೋಡೆಗೆ ಈ ಖದೀಮರು ಬಳಸಿದ್ದು ಕೇವಲ 200 ರೂ. ಪೆಪ್ಪರ್​ ಸ್ಪ್ರೇ! ಆರೋಪಿಗಳು ಅಂದರ್​ - ಅಪ್ಪಲ್ ನಾಯ್ಡು ಖಾಸಗಿ ಕಂಪನಿ ಮಾಲೀಕ

ಪೆಪ್ಪರ್ ಸ್ಪ್ರೇ ಮಾಡಿ 15 ಲಕ್ಷ ದರೋಡೆ ಮಾಡಿದ್ದ ಆಫ್ರಿಕಾದ ಇಬ್ಬರು ಪ್ರಜೆಗಳನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಯಾಂಗ್ ಲೂಯಿಸ್ ಮತ್ತು ಆಕ್ರೋಮಾನ್ ಬಪಿಸ್ಟ್ ಬಂಧಿತ ಆರೋಪಿಗಳು.

ಆಫ್ರಿಕನ್ ದರೋಡೆ ಕೋರರನ್ನು ಬಂಧಿಸಿದ ಬೆಂಗಳೂರು ಪೊಲೀಸರು

By

Published : Oct 30, 2019, 2:34 PM IST

ಬೆಂಗಳೂರು: ಪೆಪ್ಪರ್ ಸ್ಪ್ರೇ ಬಳಸಿ 15 ಲಕ್ಷ ದರೋಡೆ ಮಾಡಿದ್ದ ಆಫ್ರಿಕಾದ ಇಬ್ಬರು ಪ್ರಜೆಗಳನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಯಾಂಗ್ ಲೂಯಿಸ್ ಮತ್ತು ಆಕ್ರೋಮಾನ್ ಬಪಿಸ್ಟ್ ಬಂಧಿತರು.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಅಪ್ಪಲ್ ನಾಯ್ಡು ಖಾಸಗಿ ಕಂಪನಿ ಮಾಲೀಕರಾಗಿದ್ದು, ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಇತ್ತೀಚೆಗೆ ನಾಯ್ಡು ಅವರ ಮೊಬೈಲ್​​ಗೆ ಸೆಕೆಂಡ್ ಹ್ಯಾಂಡ್ ಲ್ಯಾಪ್​​ಟಾಪ್ ಸಿಗುತ್ತೆ ಎಂಬ ಮೆಸೇಜ್ ಬಂದಿದೆ. ಆ ನಂಬರ್​​ಗೆ ಕರೆ ಮಾಡಿದ್ದ ನಾಯ್ಡು ಹೋಟೆಲ್​​ವೊಂದರಲ್ಲಿ ಮೀಟ್ ಮಾಡಿ ಮಾತುಕತೆ ನಡೆಸುವ ಪ್ಲಾನ್​​ ಮಾಡಿದ್ದಾರೆ.

ಆದ್ರೆ ಈ ವೇಳೆ ಆಫ್ರಿಕನ್ನರು ಭೇಟಿಯಾಗಿ ಲ್ಯಾಪ್​​ಟಾಪ್ ಬದಲು ಖೋಟಾನೋಟಿನ ಬಗ್ಗೆ ಮಾತನಾಡುತ್ತಿದ್ದರು‌. ಈ ವೇಳೆ ಅಪ್ಪಲ್ ನಾಯ್ಡು ಹೇಗಾದರು ಮಾಡಿ ಆರೋಪಿಗಳನ್ನ ಪೊಲೀಸರಿಗೆ ಹಿಡಿದುಕೊಡಬೇಕೆಂಬ ಉದ್ದೇಶದಿಂದ ಮತ್ತೆ ನಕಲಿ ನೋಟು ಖರೀದಿ ಮಾಡುವುದಾಗಿ ತಿಳಿಸಿ ಹಣ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಪ್ಪಲ್ ನಾಯ್ಡು ಪೊಲೀಸರಿಗೆ ಕರೆ ಮಾಡಲು ಹೋದಾಗ ಪೆಪ್ಪರ್ ಸ್ಪ್ರೇ ಹೊಡೆದು ಹಣ ಲೂಟಿ ಮಾಡಿ ಎಸ್ಕೇಪ್ ಆಗಿದ್ರು. ನಂತರ ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸದ್ಯ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಖೋಟಾನೋಟು ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


ABOUT THE AUTHOR

...view details