ಕಲಬುರಗಿ:ಜೇವರ್ಗಿ ಪಟ್ಟಣದ ಮಸೀದಿ ಸಮೀಪ ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ತಿರುಗಾಡುತ್ತಿದ್ದವರಿಗೆ ತಿಳಿ ಹೇಳಲು ಹೋದಾಗ ಕೆಲವರು, ಪೊಲೀಸರಿಗೇ ಅವಾಜ್ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಬುದ್ಧಿ ಹೇಳಲು ಬಂದ ಪೊಲೀಸರಿಗೆ ಅವಾಜ್: ಮೂವರ ವಿರುದ್ಧ ಪ್ರಕರಣ - ಪೊಲೀಸರಿಗೆ ನಿಂದಿಸಿದ ಜನ
ಬುದ್ಧಿ ಹೇಳಲು ಹೋದ ಪೊಲೀಸರಿಗೆ ಅವಾಜ್ ಹಾಕಿ ನಿಂದಿಸಿದ ಮೂವರ ವಿರುದ್ಧಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಬುದ್ಧಿ ಹೇಳಲು ಬಂದ ಪೊಲೀಸರಿಗೆ ಅವಾಜ್: ಮೂವರ ವಿರುದ್ಧ ಪ್ರಕರಣ the case against the trio](https://etvbharatimages.akamaized.net/etvbharat/prod-images/768-512-6997229-thumbnail-3x2-awaz.jpg)
ಪೊಲೀಸರಿಗೆ ಅವಾಜ್
ಲಾಕ್ಡೌನ್ ಸಂದರ್ಭದಲ್ಲಿ ಗುಂಪು ಗುಂಪಾಗಿ ತಿರುಗಾಡಬಾರದು. ಬದಲಿಗೆ ಮನೆಯಲ್ಲೇ ಇರಿ ಹಾಗೂ ಓಡಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ. ಆದರೆ, ಪೊಲೀಸರ ಮಾತಿಗೆ ಕಿಮ್ಮತ್ತು ನೀಡದ ಜನರು ಅವರನ್ನು ನಿಂದಿಸಿದ್ದಲ್ಲದೆ, ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರೊಂದಿಗೆ ವಾಗ್ವಾದ
ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಗಫೂರ್ ಮಿಠಾಯಿ, ಅಬ್ದುಲ್ ರೆಹಮಾನ್ ಹಾಗೂ ಬಾಬಾ ಕೂಡಿ ಎಂಬವರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.