ಕರ್ನಾಟಕ

karnataka

ETV Bharat / jagte-raho

ಮೈಸೂರು ಕೊಲೆ ಪ್ರಕರಣ: ಹತ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಆರೋಪಿ - the-accused-of-murder-case-tells-why-he-killed

ಜಿಲ್ಲಾ ಪಂಚಾಯತ್ ಅಧ್ಯಕ್ಷನ ಕಾರು ಚಾಲಕನ ಹತ್ಯೆ ಮಾಡಲು ಕಾರಣ ಏನು ಎಂಬುದನ್ನು ಆರೋಪಿ ರವಿ ಬಾಯ್ಬಿಟ್ಟಿದ್ದಾನೆ. ನನ್ನ ಪತ್ನಿಯೊಂದಿಗೆ ಸುನೀಲ್​ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಜೊತೆಯಲ್ಲಿದ್ದುಕೊಂಡೇ ಮೋಸ ಮಾಡಿದ್ದಕ್ಕೆ ಕೊಲೆ ಮಾಡಿದೆ ಎಂದು ರವಿ ಹೇಳಿದ್ದಾನೆ.

the-accused-of-murder-case-tells-why-he-killed
the-accused-of-murder-case-tells-why-he-killed

By

Published : Feb 10, 2020, 12:36 PM IST

ಮೈಸೂರು:ಜಿಲ್ಲಾ ಪಂಚಾಯತ್ ಅಧ್ಯಕ್ಷನ ಕಾರು ಚಾಲಕನ ಹತ್ಯೆ ಮಾಡಲು ಕಾರಣ ಏನು ಎಂಬುದನ್ನು ಆರೋಪಿ ರವಿ ಹೇಳಿದ್ದಾನೆ.

ಕಾರು ಚಾಲಕ ಸುನೀಲ್, ನನ್ನ ಹೆಂಡತಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವಿಚಾರ ನನಗೆ ಗೊತ್ತಾದಾಗ ನಾನು ಅವನೊಂದಿಗೆ ಜಗಳ ಮಾಡಿದ್ದೆ. ಆತ ನನ್ನ ಹೆಂಡತಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ. ಈ ವಿಚಾರ ಊರಿನಲ್ಲಿ ಪ್ರಚಾರ ಆಗಿ, ನನ್ನ ಮರ್ಯಾದೆ ಹೋಗಿತ್ತು. ಹಾಗಾಗಿ ಸುನೀಲ್​ನೊಂದಿಗೆ ಒಂದು ಬಾರಿ ಜಗಳ ಸಹ ಆಗಿತ್ತು. ಆಗ ತಪ್ಪಿಸಿಕೊಂಡಿದ್ದ, ಶನಿವಾರ ಬೇಕರಿಯ ಬಳಿ ಇರುವುದನ್ನು ನೋಡಿ ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದೆ ಎಂದು ಆರೋಪಿ ರವಿ ಪೊಲೀಸರ ಎದುರು ತಪ್ಪಿಕೊಂಡಿದ್ದಾನೆ.

ಕೊಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ಆರೋಪಿ

ಸ್ಥಳ ಮಹಜರು:
ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ರವಿಯನ್ನು ಬೀಚನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದು, ಇಂದು ಹುಣಸೂರು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.

ABOUT THE AUTHOR

...view details