ಬೆಂಗಳೂರು:ಓಎಲ್ಎಕ್ಸ್ನಲ್ಲಿರುವ ಜಾಹೀರಾತು ತೋರಿಸಿ ಪತಿ ಇಲ್ಲದ ಸಮಯ ನೋಡಿ ಪತ್ನಿ ಬಳಿ ಬೈಕ್ ಅನ್ನು ಟೆಸ್ಟ್ ಡ್ರೈವ್ಗೆ ಕೊಡಿ ಎಂದು ತೆಗೆದುಕೊಂಡು ಹೋದ ವ್ಯಕ್ತಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಘಟನೆ ನಡೆದಿದೆ.
ಓಎಲ್ಎಕ್ಸ್ ಜಾಹೀರಾತು ತೋರ್ಸಿ ಬೈಕ್ ಟೆಸ್ಟ್ ಡ್ರೈವ್ ಕೇಳಿದ್ರೆ ಹುಷಾರಾಗಿರಿ... ಕಾರಣ ಇಲ್ಲಿದೆ ನೋಡಿ! - bangloore leatest news
ಓಎಲ್ಎಕ್ಸ್ನಲ್ಲಿರುವ ಜಾಹೀರಾತು ತೋರಿಸಿ ಪತಿ ಇಲ್ಲದ ಸಮಯ ನೋಡಿ ಪತ್ನಿ ಬಳಿ ಬೈಕ್ ಅನ್ನು ಟೆಸ್ಟ್ ಡ್ರೈವ್ಗೆ ಕೊಡಿ ಎಂದು ತೆಗೆದುಕೊಂಡು ಹೋದ ವ್ಯಕ್ತಿ ಬೈಕ್ ಸಮೇತ ಪರಾರಿಯಾಗಿದ್ದಾನೆ.
ಹೆಚ್ ಎಎಲ್ ನಿವಾಸಿ ಸಂತೋಷ್ ಬೈಕ್ ಮಾರಾಟ ಮಾಡಲು ಓಎಲ್ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ಆರೋಪಿ ಅರವಿಂದ್ ಬೈಕ್ ಖರೀದಿಸಲು ಮನೆಗೆ ಬಂದಿದ್ದಾನೆ. ಆದರೆ ಭಾನುವಾರ ಬೆಳಗ್ಗೆ ಕೆಲಸ ನಿಮಿತ್ತ ಸಂತೋಷ್ ಹೊರಗಡೆ ಹೋಗಿದ್ದಾರೆ. ಮನೆಯಲ್ಲಿ ಪತ್ನಿ ಮಾತ್ರ ಇದ್ದಾಗ ಪತಿ ಹಾಕಿದ ಜಾಹೀರಾತನ್ನು ತೋರಿಸಿ ಬೈಕ್ ನಾನೆ ಖರೀದಿಸುವುದಾಗಿ ಹೇಳಿದ್ದಾನೆ.
ಸಂತೋಷ್ ಪತ್ನಿಯಿಂದ ಬೈಕ್ ಕೀ ಪಡೆದು ಟೆಸ್ಟ್ ಡ್ರೈವ್ ಹೋಗಿ ವಾಪಸ್ ಬರುವುದಾಗಿ ಹೇಳಿದ್ದ ಆದರೆ ಬಳಿಕ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಇನ್ನು ಬೈಕ್ ತೆಗೆದುಕೊಂಡುಹೋದ ವ್ಯಕ್ತಿ ವಾಪಸ್ ಬರದಿದ್ದಾಗ ಸಂತೋಷ್ ಗೆ ಪತ್ನಿ ವಿಷಯ ತಿಳಿಸಿದ್ದು ಈ ಸಂಬಂಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.