ಕರ್ನಾಟಕ

karnataka

ETV Bharat / jagte-raho

ಲಾಕ್​ಡೌನ್​ ಸಮಯದ ಬಾಡಿಗೆ ಕೇಳಲು ಬಂದ ಮನೆ ಮಾಲೀಕನನ್ನೇ ಕೊಂದ ಭೂಪ! - ಚೆನ್ನೈ ಕ್ರೈಂ

ಲಾಕ್​ಡೌನ್​ ವೇಳೆ ಬಾಕಿ ಉಳಿಸಿಕೊಂಡಿದ್ದ ನಾಲ್ಕು ತಿಂಗಳ ಬಾಡಿಗೆ ಹಣವನ್ನು ಕೇಳಲು ಬಂದ ಮನೆ ಮಾಲೀಕನನ್ನು ಬಾಡಿಗೆದಾರನ ಮಗ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

Tenant kills landlord over lockdown rent row
ಮನೆ ಮಾಲೀಕನನ್ನೇ ಕೊಲೆಗೈದ ಭೂಪ

By

Published : Jul 9, 2020, 11:53 AM IST

ಚೆನ್ನೈ: ಬಾಡಿಗೆ ಪಾವತಿಸುವಂತೆ ಕೇಳಿದ ಮನೆ ಮಾಲೀಕನನ್ನು ಬಾಡಿಗೆದಾರನ ಮಗ ಕೊಲೆ ಮಾಡಿರುವ ಘಟನೆ ಚೆನ್ನೈನ ಕುಂದ್ರಾಥೂರ್​ನಲ್ಲಿ ನಡೆದಿದೆ.

ಕುಂದ್ರಾಥೂರ್ ನಿವಾಸಿ ಗುಣಶೇಖರನ್ (50) ಕೊಲೆಗೀಡಾಗಿರುವ ಮನೆ ಮಾಲೀಕ.

ಬಾಡಿಗೆ ಕೇಳಲು ಬಂದ ಮನೆ ಮಾಲೀಕನ ಕೊಲೆ

ಘಟನೆ ಹಿನ್ನೆಲೆ:

ಲಾಕ್​ಡೌನ್​ ವೇಳೆ ಬಾಕಿ ಉಳಿಸಿಕೊಂಡಿದ್ದ ನಾಲ್ಕು ತಿಂಗಳ ಬಾಡಿಗೆ ಹಣವನ್ನು ಬಾಡಿಗೆದಾರ ಧನರಾಜ್‌ ಬಳಿ ಗುಣಶೇಖರನ್ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅದೇ ದಿನ ರಾತ್ರಿ ಧನರಾಜ್​ನ ಮಗ ಅಜಿತ್ (21), ಗುಣಶೇಖರನ್​ನ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಗಾಯಾಳು ಮಾಲೀಕನನ್ನು ಕ್ರೋಮೆಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಜಿತ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details