ಕರ್ನಾಟಕ

karnataka

ETV Bharat / jagte-raho

ಮನೆಗೆ ಸೇರುವ ಮುನ್ನ ಜವರಾಯನ ಅಟ್ಟಹಾಸ... ನಿದ್ರೆಯಲ್ಲೇ ಚಿರನಿದ್ದೆಗೆ ಜಾರಿದ 10 ಜನ ಕೂಲಿಕಾರ್ಮಿಕರು! - ಕೂಲಿಕಾರ್ಮಿಕರು

ಅವರೆಲ್ಲ ಕೂಲಿ ಪಾಡಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್​ ಹೋಗುತ್ತಿದ್ದ ಸಂದರ್ಭದಲ್ಲಿ ಜವರಾಯನ ಅಟ್ಟಹಾಸಕ್ಕೆ 10 ಜನರು ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದರು.

ಮನೆಗೆ ಸೇರುವ ಮುನ್ನ ಜವರಾಯನ ಅಟ್ಟಹಾಸ

By

Published : Jul 18, 2019, 1:58 PM IST

ವಿಲ್ಲುಪುರಂ:ಕೂಲಿಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಂತ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ 10 ಜನ ಮೃತಪಟ್ಟಿರುವ ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.

ಜಾರ್ಖಂಡನಿಂದ ಸುಮಾರು 11 ಜನ ಕೂಲಿಕಾರ್ಮಿಕರು ತಮಿಳುನಾಡಿಗೆ ಬಂದಿದ್ದರು. ಇವರು ಕಾಂಚಿಪುರಂ ಜಿಲ್ಲೆಯಿಂದ ತಿರುಪೂರ್​ ಜಿಲ್ಲೆಯವರೆಗೆ ವಿದ್ಯುತ್​ ಲೈನ್​ ಎಳೆಯುವ ಕೆಲಸ ಮುಗಿಸಿಕೊಂಡು ಟ್ರಕ್​ನಲ್ಲಿ 14 ಕೂಲಿ ಕಾರ್ಮಿಕರು ವಾಪಸಾಗುತ್ತಿದ್ದರು.

ಕೂಲಿ ಕೆಲಸ ಮುಗಿಸಿಕೊಂಡು ವಾಪಸ್​ ಆಗುತ್ತಿದ್ದ ವೇಳೆ ಸುಮಾರು ಬೆಳಗಿನ ಜಾವ 2.45ಕ್ಕೆ ವಿಲ್ಲುಪುರಂ ಜಿಲ್ಲೆಯ ಕಲ್ಲಾಕುರ್ಚಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಬಂದ ಖಾಸಗಿ ಬಸ್ ಮತ್ತು ಟ್ರಕ್​ ಮಧ್ಯೆ ಡಿಕ್ಕಿಯಾಗಿ ಎರಡು ವಾಹನಗಳ ಚಾಲಕರು ಸೇರಿದಂತೆ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್​ನಲ್ಲಿ ಸುಮಾರು 26ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details