ಮಂತ್ರಾಲಯಂ ತಾಲೂಕಿನ ಖಗ್ಗಲ್ ಗ್ರಾಮದಲ್ಲಿ ತೆಲುಗು ದೇಶಂ ಪಾರ್ಟಿ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದವರು ಅಡ್ಡಿಪಡಿಸಿದ್ದಾರೆ. ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ.
ಆಂಧ್ರದಲ್ಲಿ ಜೋರಾದ ಚುನಾವಣಾ ಕಾವು... ಪ್ರಚಾರಕ್ಕೆ ಹೋದ ಟಿಡಿಪಿ ಅಭ್ಯರ್ಥಿ, ಎಎಸ್ಐಗೆ ಗುಂಡೇಟು! - undefined
ಕರ್ನೂಲ್: ಆಂಧ್ರಪ್ರದೇಶದಲ್ಲಿ ಚುಣಾವಣಾ ಕಾವು ಬಲು ಜೋರಾಗಿದೆ. ಪ್ರಚಾರಕ್ಕೆ ತೆರಳಿದ್ದ ಅಭ್ಯರ್ಥಿಗೆ ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
![ಆಂಧ್ರದಲ್ಲಿ ಜೋರಾದ ಚುನಾವಣಾ ಕಾವು... ಪ್ರಚಾರಕ್ಕೆ ಹೋದ ಟಿಡಿಪಿ ಅಭ್ಯರ್ಥಿ, ಎಎಸ್ಐಗೆ ಗುಂಡೇಟು!](https://etvbharatimages.akamaized.net/etvbharat/images/768-512-2707691-794-5b0691c6-3848-4c09-8e22-a9fffb344213.jpg)
ಟಿಡಿಪಿ ಅಭ್ಯರ್ಥಿ, ಎಎಸ್ಐಗೆ ಗುಂಡೇಟು ಚಿತ್ರ
ಟಿಡಿಪಿ ಅಭ್ಯರ್ಥಿ, ಎಎಸ್ಐಗೆ ಗುಂಡೇಟು ವಿಡಿಯೋ...
ಇನ್ನು ಎರಡು ಪಕ್ಷಗಳ ಮಧ್ಯೆ ಜಗಳವಾಗಿದ್ದು, ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಗನ್ಮ್ಯಾನ್ ಗಾಳಿಯಲ್ಲಿ ಐದು ಬಾರಿ ಗುಂಡು ಹಾರಿಸಿದ್ದಾರೆ. ಆದ್ರೆ ಈ ಗುಂಡು ಟಿಡಿಪಿ ಅಭ್ಯರ್ಥಿ ತಿಕ್ಕಾರೆಡ್ಡಿ ಕಾಲಿಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಮಾಧವರಂ ಎಎಸ್ಐ ವೇಣುಗೋಪಾಲ್ರಿಗೂ ಗುಂಡೇಟು ಬಿದ್ದಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.