ಚೆನ್ನೈ:ಶ್ರೀಲಂಕಾದ ಭೂಗತ ದೊರೆ ಅಂಗೊಡಾ ಲೊಕ್ಕಾ ಸಾವಿನ ಪ್ರಕರಣವನ್ನು ಅಪರಾಧ ತನಿಖಾ ವಿಭಾಗ (ಸಿಐಡಿ) ಹಾಗೂ ಅಪರಾಧ ಶಾಖೆಗೆ (ಸಿಬಿ) ಹಸ್ತಾಂತರಿಸಲಾಗಿದೆ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜೆ.ಕೆ.ತ್ರಿಪಾಟಿ ತಿಳಿಸಿದ್ದಾರೆ.
ಅಂಗೊಡಾ ಸಾವಿನ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡ ಕೊಯಮತ್ತೂರು ಪೊಲೀಸರು, ಮೃತದೇಹವನ್ನು ಪಡೆಯಲು ನಕಲಿ ದಾಖಲೆ ನೀಡಿದ ಮೂವರನ್ನು ಸೋಮವಾರ ಬಂಧಿಸಿದ್ದಾರೆ.