ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದೆ. ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಆರು ಡ್ರಗ್ ಪೆಡ್ಲರ್ಗಳನ್ನು ಎನ್‌ಸಿಬಿ ಬಂಧಿಸಿದೆ.
ಸುಶಾಂತ್ ಡೆತ್ ಕೇಸ್: ಎನ್‌ಸಿಬಿ ದಾಳಿಯಲ್ಲಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ - drug peddlers
ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಅರೆಸ್ಟ್ ಬಳಿಕ, ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಎನ್‌ಸಿಬಿ, ಆರು ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದೆ.
![ಸುಶಾಂತ್ ಡೆತ್ ಕೇಸ್: ಎನ್‌ಸಿಬಿ ದಾಳಿಯಲ್ಲಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ Six drug peddlers arrested so far in NCB raids](https://etvbharatimages.akamaized.net/etvbharat/prod-images/768-512-8792715-thumbnail-3x2-megha.jpg)
ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟ್ ಬಳಿಕ, ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ದಾಳಿ ನಡೆಸಿದೆ. ಮುಂಬೈನ ರಿಕ್ಷಾ ಚಾಲಕನಿಂದ ಹಿಡಿದು ಐಷಾರಾಮಿ ರೆಸ್ಟೋರೆಂಟ್ ಮಾಲೀಕನನ್ನು ಎನ್‌ಸಿಬಿ ಬಂಧಿಸಿದೆ. ಕರಮ್‌ಜೀತ್ ಸಿಂಗ್ ಆನಂದ್, ಡ್ವೇನ್ ಫರ್ನಾಂಡಿಸ್, ಸಂಕೇತ್ ಪಟೇಲ್, ಅಂಕುಶ್ ಅರ್ನೆಜಾ, ಸಂದೀಪ್ ಗುಪ್ತಾ ಮತ್ತು ಫತೇ ಅನ್ಸಾರಿ ಬಂಧಿತ ಆರು ಮಂದಿ ಡ್ರಗ್ ಪೆಡ್ಲರ್ಗಳು.
ಸತತ 3 ದಿನಗಳ ಕಾಲ ಎನ್‌ಸಿಬಿ ವಿಚಾರಣೆಯಲ್ಲಿ ನಟಿ ರಿಯಾ ಚಕ್ರವರ್ತಿ ಕೆಲವು ಪ್ರಸಿದ್ಧ ನಟ-ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರ ಹೆಸರನ್ನು ಹೇಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಶೀಘ್ರದಲ್ಲೇ ಇವರೆಲ್ಲರನ್ನೂ ಎನ್‌ಸಿಬಿ ವಿಚಾರಣೆಗೆ ಕರೆಸಿಕೊಳ್ಳಲಿದೆ.