ಕರ್ನಾಟಕ

karnataka

ETV Bharat / jagte-raho

ಡ್ರಗ್ ಕೇಸ್​: ಆದಿತ್ಯಾ ಆಳ್ವಾ ಜಾಮೀನು ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ - Vivek Oberoi

Supreme court rejected bail plea of Aditya Alva in Sandalwood drug case
ಆದಿತ್ಯಾ ಆಳ್ವಾ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ

By

Published : Dec 17, 2020, 11:48 AM IST

Updated : Dec 17, 2020, 12:15 PM IST

11:38 December 17

ಸ್ಯಾಂಡಲ್​ವುಡ್ ಡ್ರಗ್ ಪ್ರಕರಣದ 6ನೇ ಆರೋಪಿಯಾಗಿರುವ ಆದಿತ್ಯಾ ಆಳ್ವಾರ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಅಗತ್ಯವಿದ್ದರೆ ಹೈಕೋರ್ಟ್​ ಮೊರೆ ಹೋಗುವಂತೆ ಸೂಚನೆ ನೀಡಿದೆ.

ಬೆಂಗಳೂರು/ನವದೆಹಲಿ: ಸ್ಯಾಂಡಲ್​ವುಡ್ ಡ್ರಗ್ ಪ್ರಕರಣ ಸಂಬಂಧ ಆರೋಪಿ ಆದಿತ್ಯಾ ಆಳ್ವಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.  

ಡ್ರಗ್​ ಕೇಸ್​ನ 6ನೇ ಆರೋಪಿಯಾಗಿರುವ ಆದಿತ್ಯಾ ಆಳ್ವಾ, ಮಾಜಿ ಸಚಿವ ಜೀವರಾಜ್​ ಆಳ್ವಾ ಅವರ ಪುತ್ರ ಹಾಗೂ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಅವರ ಬಾಮೈದ ಆಗಿದ್ದಾರೆ. ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗುತ್ತಿದ್ದಂತೆಯೇ ಆದಿತ್ಯಾ ಆಳ್ವಾ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  

ಓದಿ:ಸ್ಯಾಂಡಲ್​​ವುಡ್ ಡ್ರಗ್ಸ್ ಕೇಸ್: ನಟ ವಿವೇಕ್ ಒಬೆರಾಯ್​ಗೆ ಶುರುವಾಯ್ತು ಎನ್​ಸಿಬಿ ಸಂಕಷ್ಟ

ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ನಿವಾಸದಲ್ಲೂ ಆದಿತ್ಯಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಒಬೆರಾಯ್ ಪತ್ನಿ ಹಾಗೂ ಆದಿತ್ಯಾ ಆಳ್ವಾ ಸಹೋದರಿಯಾಗಿರುವ ಪ್ರಿಯಾಂಕಾ ಆಳ್ವಾರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​ ನೀಡಿತ್ತು.  

ಆದಿತ್ಯಾ ಆಳ್ವಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂಕೋರ್ಟ್​ ಅಗತ್ಯವಿದ್ದರೆ ಹೈಕೋರ್ಟ್​ ಮೊರೆ ಹೋಗುವಂತೆ ಸೂಚನೆ ನೀಡಿದೆ.  

Last Updated : Dec 17, 2020, 12:15 PM IST

ABOUT THE AUTHOR

...view details