ಕರ್ನಾಟಕ

karnataka

ETV Bharat / jagte-raho

ಕಳ್ಳಸಾಗಾಣಿಕೆಗೆ ಹೊಸ ಪ್ಲಾನ್​​: ಈ ಮಹಿಳೆ ಮಾಡಿದ್ದೇನು ಗೊತ್ತಾ? - ಸಿಲಿಂಡರ್​ ಮೂಲಕ ಕಳ್ಳಸಾಗಣೆ

ಸಿಲಿಂಡರ್​ನಲ್ಲಿ ಮೀನಿನ ಮೊಟ್ಟೆ ಹಾಗೂ ರಾಸಾಯನಿಕ ಪೌಡರ್​​ಅನ್ನು ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದ ಮಹಿಳೆಯನ್ನು ಬಿಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ.

woman arrested by bsf while smuggling
ಕಳ್ಳಸಾಗಾಣಿಕೆ

By

Published : Jul 9, 2020, 6:01 PM IST

ಕೋಲ್ಕತ್ತಾ: ದೇಶವು ಕೊರೊನಾ ಬಿಕ್ಕಟ್ಟಿನಲ್ಲಿ ಸಿಲುಕಿದ್ದರೆ ಇತ್ತ ಕಳ್ಳಸಾಗಾಣಿಕೆದಾರರು ಮಾತ್ರ ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇಂತಹದೊಂದು ಪ್ರಕರಣ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೆಳಕಿಗೆ ಬಂದಿದೆ.

ಸಿಲಿಂಡರ್​ನಲ್ಲಿ ಮೀನಿನ ಮೊಟ್ಟೆ ಹಾಗೂ ರಾಸಾಯನಿಕ ಪೌಡರ್​ಅನ್ನು ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದ ಮಹಿಳೆಯನ್ನು ಬಿಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ.

ಸಿಲಿಂಡರ್​ನಲ್ಲಿ ಮೀನಿನ ಮೊಟ್ಟೆ ಸಾಗಿಸುತ್ತಿದ್ದ ಲೇಡಿ ಅರೆಸ್ಟ್​

ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಚೆಕ್ ಪೋಸ್ಟ್ ಬಳಿ ಮಹಿಳೆಯೊಬ್ಬರು ಎಲ್​ಪಿಜಿ ಸಿಲಿಂಡರ್​ ಸಾಗಿಸುತ್ತಿದ್ದನ್ನು 153ನೇ ಬೆಟಾಲಿಯನ್​ನಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಸಿಬ್ಬಂದಿ ನೋಡಿದ್ದಾರೆ. ಅನುಮಾನಗೊಂಡ ಸಿಬ್ಬಂದಿ ಆಕೆಯನ್ನು ತಡೆದು, ಪ್ರಶ್ನಿಸಿದ್ದಾರೆ. ಆಕೆ ಸರಿಯಾಗಿ ಉತ್ತರಿಸದ ಕಾರಣ, ಸೈನಿಕರು ಸಿಲಿಂಡರ್​ ಓಪನ್​ ಮಾಡಿದಾಗ ಅದರೊಳಗೆ ಮೀನಿನ ಮೊಟ್ಟೆಗಳು ಹಾಗೂ ಕೆಮಿಕಲ್​ ಪೌಡರ್​ ತುಂಬಿದ್ದ ಪೊಟ್ಟಣಗಳು ಪತ್ತೆಯಾಗಿವೆ.

ಇನ್ನು ಈಕೆ ವಿಚಾರಣೆ ವೇಳೆ ಸಿಲಿಂಡರ್​ ಗಡಿಗೆ ಕೊಂಡೊಯ್ಯಲು ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಹಿಂದೆ ಕೂಡ ಯುವಕನೋರ್ವ ಸೈಕಲ್​ನಲ್ಲಿ ಸಿಲಿಂಡರ್ ಸಾಗಿಸಿ ಕಳ್ಳಸಾಗಣೆ ಮಾಡಿದ್ದ ಘಟನೆ ಕುರಿತು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details