ಮೈಸೂರು: ಕೊರೊನಾ ಸಂದರ್ಭದಲ್ಲಿ ಯಾರು ಗಮನ ಕೊಡುವುದಿಲ್ಲ ಎಂದು ತಿಳಿದ ಬಸ್ ಮಾಲೀಕ ತನ್ನ ಎರಡು ಐಷಾರಾಮಿ ಬಸ್ಗಳಿಗೆ ಒಂದೇ ನೋಂದಣಿ ಸಂಖ್ಯೆ ಹಾಕಿ ಟ್ಯಾಕ್ಸ್ ನಿಂದ ಬಚಾವ್ ಆಗಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಎರಡು ಐಷಾರಾಮಿ ಬಸ್ಗೆ ಒಂದೇ ನೋಂದಣಿ ಸಂಖ್ಯೆ: ಮಾಲೀಕನ ವಿರುದ್ಧ ಪ್ರಕರಣ ದಾಖಲು - ಎರಡು ಐಷಾರಾಮಿ ಬಸ್ಗೆ ಒಂದೇ ನೊಂದಣಿ ಸಂಖ್ಯೆ
ಕೊರೊನಾ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲೇ ಖಾಸಗಿ ಬಸ್ಗಳು ನಿಂತಿದ್ದು, ಈ ನಡುವೆ ಕಾಮಧೇನು ಹೆಸರಿನ ಖಾಸಗಿ ಬಸ್ ಮಾಲೀಕ ತನ್ನ ಎರಡು ಐಷಾರಾಮಿ ಬಸ್ ಗಳಿಗೆ ಕೆಎ 11, ಬಿ 2969 ನೋಂದಣಿ ಸಂಖ್ಯೆ ಹಾಕಿ, ಒಂದು ಬಸ್ ಅನ್ನು ಮೈಸೂರಿನಲ್ಲಿ ಮತ್ತೊಂದು ಬಸ್ ಅನ್ನು ನಂಜನಗೂಡಿನಲ್ಲಿ ಓಡಿಸುತ್ತಿದ್ದ.
ಮೈಸೂರು ನಗರದಲ್ಲಿ ಹಾಗೂ ನಂಜನಗೂಡಿನ ಐಷಾರಾಮಿ ಬಸ್ ಗಳಿಗೆ ಒಂದೇ ನಂಬರ್ ಇದ್ದು, ಕೊರೊನಾ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲೇ ಖಾಸಗಿ ಬಸ್ಗಳು ನಿಂತಿದ್ದು, ಈ ನಡುವೆ ಕಾಮಧೇನು ಹೆಸರಿನ ಖಾಸಗಿ ಬಸ್ ಮಾಲೀಕ ತನ್ನ ಎರಡು ಐಷಾರಾಮಿ ಬಸ್ ಗಳಿಗೆ ಕೆಎ 11, ಬಿ 2969 ನೋಂದಣಿ ಸಂಖ್ಯೆ ಹಾಕಿ, ಒಂದು ಬಸ್ ಅನ್ನು ಮೈಸೂರಿನಲ್ಲಿ ಮತ್ತೊಂದು ಬಸ್ ಅನ್ನು ನಂಜನಗೂಡಿನಲ್ಲಿ ಓಡಿಸುತ್ತಿದ್ದ.
ಇದನ್ನ ತಿಳಿದ ನಂಜನಗೂಡು ಪೊಲೀಸರು, ಮೈಸೂರು ಮತ್ತು ನಂಜನಗೂಡಿನಲ್ಲಿದ್ದ 2 ಐಷಾರಾಮಿ ಬಸ್ಗಳನ್ನು ವಶಪಡಿಸಿಕೊಂಡಾಗ ಎರಡು ಬಸ್ ಗಳಲ್ಲಿ ಒಂದೇ ನಂಬರ್ ಇರುವುದು ಪತ್ತೆಯಾಗಿದೆ. ಎರಡು ಬಸ್ ಗಳನ್ನು ವಶಕ್ಕೆ ಪಡೆದು ಬಸ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.