ತಿರುಪ್ಪೂರ್ (ತಮಿಳುನಾಡು): ನಿಯಂತ್ರಣ ತಪ್ಪಿದ ಬೈಕ್ವೊಂದು ಬಸ್ ಚಕ್ರದಡಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ನಲ್ಲಿ ಶುಕ್ರವಾರ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತಪಟ್ಟ ಮಹಿಳೆಯನ್ನು ಚಂದ್ರಿಕಾ (45) ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಕುಳಿತು ಚಂದ್ರಿಕಾ, ಅವರ ಮಗಳು ಶೃತಿ (25) ಹಾಗೂ ಮೊಮ್ಮಗಳು ಅಧಿರಾ ಸಂಚರಿಸುತ್ತಿದ್ದ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡಿದೆ. ಅದೇ ಸಂದರ್ಭ ಪಕ್ಕದಲ್ಲಿ ಬಂದ ಆರ್‌ಟಿಸಿ ಬಸ್ ತಗುಲಿ ಬೈಕ್ನಲ್ಲಿದ್ದ ಮೂವರೂ ಬಸ್ ಕೆಳಗೆ ಬಿದ್ದಿದ್ದಾರೆ. ಚಂದ್ರಿಕಾ ಮೇಲೆ ಬಸ್ ಹರಿದುಹೋಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.