ಸೊಲ್ಲಾಪುರ (ಮಹಾರಾಷ್ಟ್ರ): ಬಿಜೆಪಿ ಮುಖಂಡನಿಗೆ ಕಪ್ಪು ಶಾಹಿ ಬಳಿದಿದ್ದ ಶಿವಸೇನೆಯ 17 ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟೀಕಿಸಿದ್ದ ಬಿಜೆಪಿ ಮುಖಂಡ ಶಿರೀಶ್ ಕಟೇಕರ್ ಮೇಲೆ ನಿನ್ನೆ ಸೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಅವರ ಮೇಲೆ ಕಪ್ಪು ಶಾಯಿ ಸುರಿದು, ಸೀರೆ ಧರಿಸಲು ಒತ್ತಾಯಿಸಿದ್ದರು.
ಬಿಜೆಪಿ ಮುಖಂಡನಿಗೆ ಕಪ್ಪು ಶಾಹಿ ಬಳಿದಿದ್ದ ಶಿವಸೇನೆ ಕಾರ್ಯಕರ್ತರು ಬಳಿಕ ಪ್ರತಿಕ್ರಿಯೆ ನೀಡಿದ್ದ ಶಿವಸೇನೆ ಕಾರ್ಯಕರ್ತರೊಬ್ಬರು, ಉದ್ಧವ್ ಠಾಕ್ರೆ ನಮಗೆ ಪೂಜ್ಯ ವ್ಯಕ್ತಿಯಾಗಿದ್ದು, ಅವರನ್ನು ಯಾರು ನಿಂದಿಸಿದರೂ ಅದನ್ನು ನಾವು ಸಹಿಸುವುದಿಲ್ಲ. ಈ ಕೃತ್ಯದ ಹೊಣೆಯನ್ನು ಹೊರಲು, ಬೇಕಾದರೆ ಜೈಲಿಗೆ ಹೋಗಲು ಕೂಡ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದರು.
ಇದೀಗ ಸೊಲ್ಲಾಪುರ ಪೊಲೀಸರು ಎಲ್ಲಾ 17 ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.