ಕರ್ನಾಟಕ

karnataka

ETV Bharat / jagte-raho

ಕೊನೆಗೂ ಸಿಕ್ಕಿಬಿದ್ದ ಪೊಲೀಸರ ಮೊಬೈಲ್ ಕದ್ದ ಕಳ್ಳ - ಹಿಂದೂ ಮಹಾ ಮಂಡಳದ ಗಣಪತಿ ವಿಸರ್ಜನಾ

ಪೊಲೀಸ್ ಠಾಣೆಗೆ ಬಂದು ಜನಸಾಮಾನ್ಯರು ತಮ್ಮ ಮೊಬೈಲ್ ಕಳೆದು ಹೋಗಿದೆ ಅಂತ ದೂರು ನೀಡೋದು ಕಾಮನ್. ಆದ್ರೆ, ಪೊಲೀಸರ ಮೊಬೈಲ್‌ಗಳನ್ನೇ ಕದ್ದು ಎಸ್ಕೇಪ್ ಆಗಿದ್ದ ಚಾಲಾಕಿ ಕಳ್ಳನನ್ನ ದೊಡ್ಡಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೊನೆಗೂ ಸಿಕ್ಕಿಬಿದ್ದ ಪೊಲೀಸರ ಮೊಬೈಲ್ ಕದ್ದ ಕಳ್ಳ....

By

Published : Nov 9, 2019, 9:42 PM IST

ಶಿವಮೊಗ್ಗ:ಪೊಲೀಸ್ ಠಾಣೆಗೆ ಜನಸಾಮಾನ್ಯರು ತಮ್ಮ ಮೊಬೈಲ್ ಕಳೆದು ಹೋಗಿದೆ ಅಂತ ದೂರು ನೀಡೋದು ಕಾಮನ್. ಆದ್ರೆ, ಪೊಲೀಸರ ಮೊಬೈಲ್‌ಗಳನ್ನೇ ಕದ್ದು ಎಸ್ಕೇಪ್ ಆಗಿದ್ದ ಚಾಲಾಕಿ ಕಳ್ಳನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಕೊನೆಗೂ ಸಿಕ್ಕಿಬಿದ್ದ ಪೊಲೀಸರ ಮೊಬೈಲ್ ಕದ್ದ ಕಳ್ಳ....

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 12 ರಂದು ನಡೆದ ಹಿಂದೂ ಮಹಾ ಮಂಡಳದ ಗಣಪತಿ ನಿಮ್ಮಜ್ಜನೆ ಬಂದೋಬಸ್ತ್‌ಗೆ ರಾಜ್ಯದ ವಿವಿಧೆಡೆಯಿಂದ ಪೊಲೀಸರು ಆಗಮಿಸಿದ್ದರು. ಅಂದು ರಾತ್ರಿ 2 ಗಂಟೆಗೆ ಗಣಪತಿ ನಿಮಜ್ಜನೆ ಕಾರ್ಯಕ್ರಮ ಮುಗಿಸಿ ತಮಗೆ ನೀಡಿದ್ದ ಸೌಭಾಗ್ಯ ಕಲ್ಯಾಣ ಮಂದಿರದಲ್ಲಿ ಪೊಲೀಸರು ಮಲಗಿದ್ದ ವೇಳೆ 4 ಗಂಟೆಗೆ ಸುಮಾರಿಗೆ ಕಳ್ಳನೊಬ್ಬ 23 ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ನಂತ್ರ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದು ಬಳಿಕ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details