ಕರ್ನಾಟಕ

karnataka

ETV Bharat / jagte-raho

ರೈಲಿನಲ್ಲಿ ಅಕ್ರಮ ಚಿನ್ನ ಸಾಗಾಟ: 4 ಕೋಟಿ ರೂ ಮೌಲ್ಯದ ಚಿನ್ನ,ನಗದು ವಶ, ಆರೋಪಿಗಳ ಬಂಧನ - ಮಂಗಳೂರಿಗೆ ರೈಲಿನಲ್ಲಿ ಚಿನ್ನ ಸಾಗಿಸುತ್ತಿದ್ದ

ರೈಲಿನಲ್ಲಿ ಕ್ಯಾಲಿಕಟ್ ನಿಂದ ಮಂಗಳೂರಿಗೆ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಕಂದಾಯ ಇಲಾಖೆ ವಿಚಕ್ಷಣಾ ದಳ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

Kn_mng_02_gold_size_photo_7202146
ರೈಲಿನಲ್ಲಿ ಅಕ್ರಮ ಚಿನ್ನ ಸಾಗಾಟ, 4 ಕೋಟಿ ಮೌಲ್ಯದ ಚಿನ್ನ-ನಗದು ಸೇರಿ ಏಳು ಜನರ ಬಂಧನ

By

Published : Mar 19, 2020, 3:28 PM IST

ಮಂಗಳೂರು:ರೈಲಿನಲ್ಲಿ ಕ್ಯಾಲಿಕಟ್‌ನಿಂದ ಮಂಗಳೂರಿಗೆ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಕಂದಾಯ ಇಲಾಖೆ ವಿಚಕ್ಷಣಾ ದಳ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ರೈಲಿನಲ್ಲಿ ಸಾಗಿಸುತ್ತಿದ್ದ 5.6 ಕೆ.ಜಿ ಚಿನ್ನ ಸೇರಿದಂತೆ 5.2 ಕೆ.ಜಿ ಬೆಳ್ಳಿ ಮತ್ತು 84 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು 100 ಗ್ರಾಂ ನಂತೆ ತುಂಡು ಮಾಡಿ ಗಟ್ಟಿ ರೂಪದಲ್ಲಿ ಸಾಗಿಸಲಾಗುತ್ತಿತ್ತು. ಆರೋಪಿಗಳಾದ ಸೈಯ್ಯದ್ ಮಹಮ್ಮದ್ ಮತ್ತು ಅಶೋಕ್ ಕೆ.ಎಸ್.ಕ್ಯಾಲಿಕೆಟ್‌ನಿಂದ ಮಂಗಳೂರಿಗೆ ರೈಲಿನಲ್ಲಿ ಚಿನ್ನ ಸಾಗಿಸುತ್ತಿದ್ದರು. ಇದನ್ನು ಮಂಜುನಾಥ್ ಶೇಟ್ ಎಂಬವರಿಗೆ ನೀಡಲು ಬಂದಾಗ ಪತ್ತೆ ಹಚ್ಚಿದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಚಿನ್ನ ಸಾಗಾಟದ ಮಾಸ್ಟರ್ ಮೈಂಡ್ ನವೀನ್ ಚಂದ್ರ ಕಾಮತ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗದ 40 ಅಧಿಕಾರಿಗಳು ಭಾಗಿಯಾಗಿದ್ದರು.

ABOUT THE AUTHOR

...view details