ಶಿವಮೊಗ್ಗ:ಅತಿವೇಗವಾಗಿ ಬಂದ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸನಗರದ ಬಟ್ಟೆ ಮಲ್ಲಪ್ಪ ಬಳಿ ನಡೆದಿದೆ.
ಸರಣಿ ಅಪಘಾತ: ಓರ್ವ ಮಹಿಳೆ ಸಾವು... ಮತ್ತೋರ್ವ ವ್ಯಕ್ತಿಗೆ ತೀವ್ರ ಗಾಯ - ಹೊಸನಗರದ ಬಟ್ಟೆ ಮಲ್ಲಪ್ಪ ಬಳಿ ಅಪಘಾತ
ಬಟ್ಟೆ ಮಲ್ಲಪ್ಪ ಸಮೀಪದ ಮಾರುತಿಪುರದ ಕಡೆಯಿಂದ ಬಂದ ಮಾರುತಿ ರಿಡ್ಜ್ ಕಾರು ಇಲ್ಲಿನ ರಾಮಕೃಷ್ಣ ಶಾಲೆ ಬಳಿ ಓರ್ವನಿಗೆ ಮೊದಲು ಡಿಕ್ಕಿಯಾಗಿದ್ದು, ನಂತರ ರಸ್ತೆಯಲ್ಲಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ನಂತರ ಅದೇ ಸರ್ಕಲ್ನಲ್ಲಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಬಟ್ಟೆ ಮಲ್ಲಪ್ಪ ಸಮೀಪದ ಮಾರುತಿಪುರದ ಕಡೆಯಿಂದ ಬಂದ ಮಾರುತಿ ರಿಡ್ಜ್ ಕಾರು ಇಲ್ಲಿನ ರಾಮಕೃಷ್ಣ ಶಾಲೆ ಬಳಿ ಓರ್ವನಿಗೆ ಮೊದಲು ಡಿಕ್ಕಿಯಾಗಿದ್ದು, ನಂತರ ರಸ್ತೆಯಲ್ಲಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ನಂತರ ಅದೇ ಸರ್ಕಲ್ನಲ್ಲಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಮುಂದೆ ಹಾಲಿನ ಡೈರಿ ಬಳಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ವೇಗಕ್ಕೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯವಾಗಿದೆ.
ಕಾರು ಚಾಲಕ ಪಾನಮತ್ತನಾಗಿದ್ದ ಎನ್ನಲಾಗಿದ್ದು, ಸರಣಿ ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.