ಕರ್ನಾಟಕ

karnataka

ETV Bharat / jagte-raho

16 ರೂ ಕೋಟಿ ಮೌಲ್ಯದ 42 ಕೆ.ಜಿ ಚಿನ್ನ ವಶಕ್ಕೆ: ಕಂದಾಯ ಗುಪ್ತಚರ ನಿರ್ದೇಶನಾಲಯ ಕಾರ್ಯಾಚರಣೆ - smuggled gold

ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅಕ್ರಮವಾಗಿ 42 ಕೆ.ಜಿ ಚಿನ್ನ ಸಾಗಿಸುತ್ತಿದ್ದ 10 ಮಂದಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ಬಂಧಿಸಿದ್ದಾರೆ.

seized 42 kg of smuggled gold valued
seized 42 kg of smuggled gold valued

By

Published : Dec 10, 2019, 10:39 PM IST

ನವದೆಹಲಿ:ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಅಕ್ರಮವಾಗಿ 42 ಕೆ.ಜಿ ಚಿನ್ನ ಸಾಗಿಸುತ್ತಿದ್ದ 10 ಮಂದಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ಬಂಧಿಸಿದ್ದಾರೆ.

ಡಿಸೆಂಬರ್ 8ರಂದು ಕೋಲ್ಕತಾ, ರಾಯ್ಪುರ ಮತ್ತು ಮುಂಬೈನಲ್ಲಿ ಡಿಆರ್‌ಐ ತಂಡ ಪ್ರತ್ಯೇಕ ಕಾರ್ಯಾಚರಣೆ ನಡೆಸಿತು. ಈ ಸಮಯದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹ 16.5 ಕೋಟಿ ಮೌಲ್ಯದ 42 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.

ಒಟ್ಟಾರೆ ಈ ವರ್ಷದಲ್ಲಿ ಇದುವರೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹ 490 ಕೋಟಿ ಮೌಲ್ಯದ 1,400 ಕೆ.ಜಿ ಚಿನ್ನ, ಕಳೆದ 2018-19ರ ಆರ್ಥಿಕ ವರ್ಷದಲ್ಲಿ ₹ 1,265 ಕೋಟಿ ಮೌಲ್ಯದ 4,000 ಕೆ.ಜಿ ಚಿನ್ನ ಮತ್ತು 164 ಕೋಟಿ ನಗದನ್ನು ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details