ಮಂಗಳೂರು: ನಗರದ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಸ್‌ಡಿಎ ಅಧಿಕಾರಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಇಂದು ಬಂಧಿಸಿದ್ದಾರೆ.
ಓದಿ: ಬ್ಯಾಂಕ್ ಅಧಿಕಾರಿಗಳ ಯಡವಟ್ಟು: 2.40 ಲಕ್ಷ ರೂ. ಬಡ್ಡಿ ಹಣ ಕಟ್ಟುವಂತೆ ನಿತ್ಯ ಕಿರುಕುಳ ಆರೋಪ

ರಫೀಕ್ ಅಬ್ದುಲ್ (42) ಬಂಧಿತ ಆರೋಪಿಯಾಗಿದ್ದು, ಕಚೇರಿಯ ಕೆಲಸವೊಂದನ್ನು ಮಾಡಿಕೊಡಲು 40 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಂತ್ರಸ್ತರು ದೂರು ದಾಖಲಿಸಿರುವ ಹಿನ್ನೆಲೆ ಆರೋಪಿಗೆ ನಗದು ನೀಡುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಿ, ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.