ಕರ್ನಾಟಕ

karnataka

ETV Bharat / jagte-raho

ಸ್ಯಾಂಡಲ್‌ವುಡ್ ಸ್ಟಾರ್ ಸಹೋದರರಿಗೆ ಸಿಸಿಬಿ ಶಾಕ್! ನಶೆ ಏರಿಸಿಕೊಂಡವರ ಡ್ರಿಲ್‌ಗೆ ಸಿದ್ಧತೆ - ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಮಾಫಿಯಾ ಸಂಪರ್ಕದ ಆರೋಪ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿ ಬಹಿರಂಗವಾಗುತ್ತಲೇ ಇದೆ. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ಗಳ ವಿಚಾರಣೆಗೆ ತನಿಖಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

sandalwood drug case - ccb continued enquiries
ಸ್ಯಾಂಡಲ್‌ವುಡ್ ಸ್ಟಾರ್ ಸಹೋದರರಿಗೆ ಸಿಸಿಬಿ ಶಾಕ್! ನಶೆ ಏರಿಸಿಕೊಂಡವರ ಡ್ರಿಲ್‌ಗೆ ಸಿದ್ಧತೆ

By

Published : Sep 17, 2020, 12:13 PM IST

ಬೆಂಗಳೂರು:ಸ್ಯಾಂಡಲ್‌ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ‌ಸಿಸಿಬಿ ಪೊಲೀಸರ ಬೇಟೆ ಮುಂದುವರಿದಿದ್ದು, ಸದ್ಯ ವಿಚಾರಣೆಗೆ ಒಳಗಾಗಿ ಬಂಧನದಲ್ಲಿರುವ ನಟಿಯರು ಹಾಗೂ ಇತರ ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಎಂದೇ ಗುರುತಿಸಿಕೊಂಡಿರುವ ಇಬ್ಬರಿಗೆ ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರ ತಂದೆ ಕೂಡ ಸಿನಿಮಾ ಕ್ಷೇತ್ರದಲ್ಲಿ ಬಹಳಷ್ಟು ಹೆಸರು‌ಮಾಡಿದವರು. ಸದ್ಯ ಇವರ ಮಕ್ಕಳಿಗೂ ಕೂಡ ಡ್ರಗ್ಸ್​ ಜಾಲದ ನಂಟು ಇರುವ ಕಾರಣ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ವಿಚಾರಣೆಗೆ ಕರೆಯುವ ಮುಂಚೆ ಸ್ಟಾರ್ ಫ್ಯಾಮಿಲಿಯ ಪಿನ್ ಟು ಪಿನ್ ಮಾಹಿತಿಯನ್ನ ಸಿಸಿಬಿ ತನಿಖಾಧಿಕಾರಿಗಳು ಕಲೆಹಾಕ್ತಿದ್ದಾರೆ. ಹಾಗೆ ಈಗಾಗಲೇ ಡ್ರಗ್ಸ್​ ನಂಟು ಕುರಿತು ಬಂಧಿತ ಆರೋಪಿಗಳು ಕೂಡ ಕೆಲ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

ಸದ್ಯ ಸಿಸಿಬಿ ಪೊಲೀಸರು ಪೂರಕ ದಾಖಲೆಗಳನ್ನು ಕಲೆ ಹಾಕ್ತಿದ್ದು, ತನಿಖೆ ವೇಳೆ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಸಾಕ್ಷ್ಯ ಸಿಕ್ಕರೆ ನೋಟಿಸ್ ಕೊಟ್ಟು ಮೊದಲು ವಿಚಾರಣೆಗೆ ಕರೆಯಲಿದ್ದಾರೆ. ವಿಚಾರಣೆಗೆ ಬಂದವರ ಮೊಬೈಲ್ ವಶಕ್ಕೆ ಪಡೆದು ರಿಟ್ರೈವ್​ ಮಾಡಲಿದ್ದಾರೆ. ರಿಟ್ರೈವ್​ ಮಾಡುವಾಗ ಡ್ರಗ್ಸ್​ ಪೆಡ್ಲಿಂಗ್ ಮಾಡಿರುವುದಕ್ಕೆ ಸಾಕ್ಷ್ಯ ಸಿಕ್ಕರೆ ಸ್ಟಾರ್ ಕುಟುಂಬದ ಇಬ್ಬರು ಮಕ್ಕಳ ಬಂಧನವಾಗುವುದು ಪಕ್ಕಾ ಎನ್ನಲಾಗುತ್ತಿದೆ.

ABOUT THE AUTHOR

...view details