ಕರ್ನಾಟಕ

karnataka

ETV Bharat / jagte-raho

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್​ಗೆ ವಿನಾಯಿತಿ ನೀಡಿದ ಜೋಧ್​ಪುರ ಕೋರ್ಟ್​ - blackbuck poaching and Arms Act case

1998ರ ಕೃಷ್ಣಮೃಗ ಬೇಟೆ ಪ್ರಕರಣ ಸಂಬಂಧ ಪ್ರಸ್ತುತ ಕೋವಿಡ್​ ಪರಿಸ್ಥಿತಿಯಲ್ಲಿ ನಟ ಸಲ್ಮಾನ್ ಖಾನ್ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

Salman Khan gets exemption from appearance in blackbuck poaching case hearing
ಸಲ್ಮಾನ್ ಖಾನ್

By

Published : Jan 16, 2021, 1:28 PM IST

ಜೋಧ್​ಪುರ (ರಾಜಸ್ಥಾನ): ಕೃಷ್ಣಮೃಗ ಬೇಟೆ ಪ್ರಕರಣ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಕೇಸ್​ ಸಂಬಂಧ ಇದೀಗ ರಾಜಸ್ಥಾನದ ಜೋಧ್​ಪುರ ಜಿಲ್ಲಾ ಸೆಷನ್ಸ್​ ನ್ಯಾಯಾಲಯ ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ವಿನಾಯಿತಿ ನೀಡಿದೆ.

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಜೋಧ್​​ಪುರದ​​​ ಕಂಕಣಿ ಗ್ರಾಮದ ಬಳಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು.

ಆದರೆ, 2018 ರಲ್ಲಿ ಚೀಫ್​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್ ಕೋರ್ಟ್​ ಸಲ್ಮಾನ್ ಖಾನ್ ಹಾಗೂ ಕೃಷ್ಣಮೃಗ ಬೇಟೆ ವೇಳೆ ಅವರೊಂದಿಗೆ ಇದ್ದ ಬಾಲಿವುಡ್​ ತಾರೆಗಳಾದ ಟಬು, ಸೈಫ್ ಅಲಿ ಖಾನ್, ನೀಲಂ, ಸೋನಾಲಿ ಬೇಂದ್ರೆ, ದುಷ್ಯಂತ್ ಸಿನ್ಹಾ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಐವರನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಫ್ಲಾಟ್​ನ ಗೋಡೆಯಲ್ಲಿ ಶವ ಅಡಗಿಸಿಟ್ಟಿದ್ದ ಭೂಪ: ಮುಂದೇನಾಯ್ತು?​

ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನಂತರ ಮತ್ತೆ ವಿಚಾರಣೆ ನಡೆಸಿದ ಜೋಧ್​​ಪುರ್ ಕೋರ್ಟ್ 2019 ಮೇ ತಿಂಗಳಲ್ಲಿ ಈ ಐವರಿಗೂ ಹೊಸದಾಗಿ ನೋಟೀಸ್ ನೀಡಿತ್ತು. ಆದರೆ ಸಲ್ಮಾನ್ ಖಾನ್ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಮುಂದಿನ ವಿಚಾರಣೆಗೆ ಕೋರ್ಟ್​ಗೆ ಹಾಜರಾಗದಿದ್ದಲ್ಲಿ ಜಾಮೀನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಲ್ಮಾನ್​ ಪರ ವಕೀಲ ಹೆಚ್​ ಎಂ ಸರಸ್ವತ್​, ಮುಂಬೈ ಹಾಗೂ ಜೋಧ್​ಪುರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ಸಲ್ಮಾನ್​ ಖಾನ್​ಗೆ ಕೋರ್ಟ್​ಗೆ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತದೆ ಎಂದು ಉಲ್ಲೇಖಿಸಿದ್ದರು.

ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ಜೋಧ್​ಪುರ ಜಿಲ್ಲಾ ನ್ಯಾಯಾಲಯ, ಪ್ರಸ್ತುತ ಕೋವಿಡ್​ ಪರಿಸ್ಥಿತಿಯಲ್ಲಿ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ABOUT THE AUTHOR

...view details