ಬೆಂಗಳೂರು:ಸಿಲಿಕಾನ್ ಸಿಟಿ ಜನರನ್ನ ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ರೌಡಿ ಶೀಟರ್ ಮಂಜುನಾಥ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೋಹಿತ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೌಡಿ ಶೀಟರ್ ಮಂಜುನಾಥ್ ಕೊಲೆ ಪ್ರಕರಣ: ಪ್ರಮುಖ ಆರೋಪಿಯನ್ನ ಬಂಧಿಸಿದ ಮಹಾದೇವಪುರ ಪೋಲಿಸರು ಕಳೆದ ಅಕ್ಟೋಬರ್ 25 ರಂದು ಮಹದೇವಪುರದ ಫಿನಿಕ್ಸ್ ಮಾಲ್ ಬಳಿ ಸಾರ್ವಜನಿಕರ ಎದುರಲ್ಲೇ ರೌಡಿ ಶೀಟರ್ ಮಂಜುನಾಥನ ಮೇಲೆ ಡಿಯೋ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಚ್ಚು ಬೀಸಿ ಕೊಲೆ ಮಾಡಿದ್ದರು. ಘಟನೆ ನಡೆದ ನಂತರ ಮೂವರು ಆರೋಪಿಗಳನ್ನು ಮಹಾದೇವಪುರ ಪೊಲಿಸರು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಮುಖ ಆರೋಪಿ ರೋಹಿತ್ ಅನ್ನೋ ವಿಚಾರ ತಿಳಿದು ಬಂದಿತ್ತು.
ಹೀಗಾಗಿ ಇಂದು ಜೈಲಿನಿಂದ ರೋಹಿತ್ ಹೊರಗೆ ಬರುತ್ತಿದ್ದ ಹಾಗೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆಗೆ ಕಾರಣ:
ಕೊಲೆಯಾದ ರೌಡಿ ಶೀಟರ್ ಮಂಜುನಾಥ್ ಹಾಗೂ ಆರೋಪಿ ನಡುವೆ ಹಿಂದೆ ಗಲಾಟೆ ನಡೆದು ಆರೋಪಿ ಜೈಲು ಪಾಲಾಗಿದ್ದ. ಹೀಗಾಗಿ ಹಳೇ ದ್ವೇಷಕ್ಕೆ ಜೈಲಿನಿಂದಲೇ ಮಂಜನಿಗೆ ಸ್ಕೆಚ್ ಹಾಕಿದ್ದ ರೋಹಿತ್ ತನ್ನ ಸಹಚರರಿಗೆ ಹೇಳಿಸಿ ಕೊಲೆ ಮಾಡಿಸಿದ್ದ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು ತನಿಖೆ ಮುಂದುವರಿದಿದೆ.