ಉತ್ತರ ಪ್ರದೇಶ: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಡಿಸಿಎಂ ವಾಹನ ಪಲ್ಟಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟಿದ್ದು, 12 ಮಂದಿಗೆ ಗಾಯಗಳಾಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಝಾನ್ಸಿ-ಮಿರ್ಜಾಪುರ ಹೆದ್ದಾರಿಯಲ್ಲಿ ಕಳೆದ ರಾತ್ರಿ ನಡೆದಿದೆ.
ವಲಸೆ ಕಾರ್ಮಿಕರಿದ್ದ ಟ್ರಕ್ ಅಪಘಾತ: ಮೂವರು ಮಹಿಳೆಯರು ಸಾವು, 12 ಮಂದಿಗೆ ಗಾಯ - road accident
ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಅಪಘಾತ
ವಾಹನದಲ್ಲಿ ಒಟ್ಟು 17 ಮಂದಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ. ಕಾಲ್ನಡಿಗೆಯಲ್ಲೇ ದೆಹಲಿಯಿಂದ ಮಹೋಬಾಗೆ ಬರುತ್ತಿದ್ದ ಕಾರ್ಮಿಕರನ್ನು ನೋಡಿದ ಪೊಲೀಸರು ಟ್ರಕ್ನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಟೈರ್ ಪಂಕ್ಚರ್ ಆಗಿ ಗಾಡಿ ಪಲ್ಟಿ ಹೊಡೆದು ಅವಘಡ ಸಂಭವಿಸಿದೆ.
ಅಪಘಾತಕ್ಕೀಡಾದ ವಾಹನದಲ್ಲಿ ಪುಟ್ಟ ಮಗು ಕೂಡ ಇದ್ದು, ಅಪಾಯದಿಂದ ಪಾರಾಗಿದೆ. ಆದರೆ ಕಂದಮ್ಮನ ತಾಯಿ ಮೃತಪಟ್ಟಿದ್ದು, ತಂದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
Last Updated : May 19, 2020, 8:32 AM IST