ಪಾಟ್ನಾ:ಬಿಹಾರದ ಪಾಟ್ನಾದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡನೋರ್ವನನ್ನು ಗನ್ ಹಿಡಿದು ಬಂದ ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮಂಡಲ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಜ್ಹಾ, ಮೃತ ಬಿಜೆಪಿ ನಾಯಕ.
ರಾಜೇಶ್ ಕುಮಾರ್ ಇಂದು ಬೆಳಗ್ಗೆ ವಾಕಿಂಗ್ಗೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಪಾಟ್ನಾದ ಸೀತಾರಾಮ್ ಉತ್ಸವ್ ಹಾಲ್ ಬಳಿ ಗುಂಡು ಹಾರಿಸಿದ್ದಾರೆ. ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಿದ್ದು, ರಾಜೇಶ್ ಕುಮಾರ್ರ ಮೃತದೇಹವನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (PMCH)ಗೆ ರವಾನಿಸಿಲಾಗಿದೆ.