ಮಂಡ್ಯ:ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವಿದ್ಯಾನಗರದ 2ನೇ ಕ್ರಾಸ್ನಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಕುಟುಂಬಸ್ಥರ ಎದುರೇ ವ್ಯಕ್ತಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ಮಂಡ್ಯ ಜನತೆ - ಬುಂಡಾರಾಮ್ ಪತ್ನಿ ಮತ್ತು ಮಕ್ಕಳನ್ನು ಕಟ್ಟಿ ರೂಮ್ ಗೆ ಕೂಡಿ ಹಾಕಿದ್ದಾರೆ
ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವಿದ್ಯಾನಗರದ 2ನೇ ಕ್ರಾಸ್ನಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ವಿದ್ಯಾನಗರದ 2ನೇ ಕ್ರಾಸ್ನಲ್ಲಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬಾತನನ್ನು ಆತನ ಕುಟುಂಬಸ್ಥರ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ. ಗುತ್ತಲ ರಸ್ತೆಯಲ್ಲಿ ಬುಂಡಾರಾಮ್ ಹಾರ್ಡ್ವೇರ್ ಅಂಗಡಿ ಹೊಂದಿದ್ದರು. ಮಧ್ಯರಾತ್ರಿ ಮನೆಗೆ ಆಗಮಿಸಿದ ನಾಲ್ಕು ಮಂದಿ ದುಷ್ಕರ್ಮಿಗಳು, ಮೊದಲು ಫೋನ್ ಕರೆ ಮಾಡಿ ಕೆಳಗೆ ಕರೆಸಿಕೊಂಡಿದ್ದಾರೆ. ನಂತರ ಆತನಿಗೆ ಗನ್ ತೋರಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೊಲೆಗೂ ಮೊದಲೇ ಬುಂಡಾರಾಮ್ ಪತ್ನಿ ಮತ್ತು ಮಕ್ಕಳನ್ನು ಕಟ್ಟಿ ರೂಮ್ನಲ್ಲಿ ಕೂಡಿಹಾಕಿದ್ದಾರೆ ಎನ್ನಲಾಗಿದೆ.
ಕೊಲೆ ನಂತರ ಪತ್ನಿಯ ಮೈಮೇಲೆ ಇದ್ದ ಆಭರಣಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕನ್ನಡದಲ್ಲೇ ಮಾತನಾಡುತ್ತಿದ್ದ ದುಷ್ಕರ್ಮಿಗಳ ಬಗ್ಗೆ ಬುಂಡಾರಾಮ್ ಪತ್ನಿ ಮಾಹಿತಿ ನೀಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.