ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಮುಂದೆ ಧರಣಿ ಮಾಡಲು ಮುಂದಾಗಿದ್ದ ರಾಘವ್ ಚಡ್ಡಾ ಸೇರಿ ಆಮ್ ಆದ್ಮಿ ಪಕ್ಷದ (ಎಎಪಿ) ಮೂವರು ಶಾಸಕರನ್ನು ದೆಹಲಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಹಣ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ, ಇದರ ವಿರುದ್ಧ ಅಮಿತ್ ಶಾ ನಿವಾಸದ ಮುಂದೆ ಧರಣಿ ನಡೆಸಲು ಅನುಮತಿ ಕೋರಿ ರಾಘವ್ ನಿನ್ನೆ ದೆಹಲಿ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಗೃಹ ಸಚಿವರಿಗೆ ಶೂ ಎಸೆದಿದ್ದ ಈತ ಇದೀಗ ಆಪ್ನ ಅಭ್ಯರ್ಥಿ!!!
ಇದಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು, ಕೋವಿಡ್ ಸಾಂಕ್ರಾಮಿಕ ಹಿನ್ನೆಲೆ ಡಿ.31ರವರೆಗೆ ನಗರದಲ್ಲಿ ಯಾವುದೇ ರೀತಿಯ ಕೂಟ ನಿಷೇಧಿಸಲಾಗಿದೆ. ಕೊರೊನಾ ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಕರಿಸುವಂತೆ ನಿಮ್ಮನ್ನು ಕೋರಲಾಗಿದೆ ಎಂದು ಹೇಳಿ ರಾಘವ್ ಮನವಿಯನ್ನು ತಿರಸ್ಕರಿಸಿದ್ದರು.
ಇದೀಗ ಶಾಸಕರಾದ ರಾಘವ್ ಚಡ್ಡಾ, ರಿತುರಾಜ್ ಗೋವಿಂದ್ ಮತ್ತು ಕುಲದೀಪ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಧರಣಿಯ ಪ್ಲಾನ್ ಅನ್ನು ವಿಫಲಗೊಳಿಸಿದ್ದಾರೆ.