ಕರ್ನಾಟಕ

karnataka

ETV Bharat / jagte-raho

ಆಸ್ತಿ ವಿವಾದ... ತಾಯಿ-ಮಗಳ ಕೊಲೆ ಯತ್ನ: ಸಿಸಿಟಿವಿ ದೃಶ್ಯ ವೈರಲ್​ - ಬೆಂಗಳೂರು ಆಸ್ತಿ ವಿವಾದ ತಾಯಿ ಮಗಳ ಕೊಲೆ ಯತ್ನ

ಆಸ್ತಿ ವಿವಾದ ಹಿನ್ನೆಲೆ ತಾಯಿ-ಮಗಳನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈಯಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

property-dispute-outlaws-attempt-to-kill-mother-and-daughter-in-bangalore
ತಾಯಿ ಮಗಳ ಕೊಲೆ ಯತ್ನ

By

Published : Sep 7, 2020, 5:28 PM IST

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆ ನಡುರಸ್ತೆಯಲ್ಲೇ ತಾಯಿ-ಮಗಳ ಹತ್ಯೆಗೆ ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ವೈರಲ್​ ಆಗಿದೆ.

ಸೆ.04 ರಂದು ಸಿ.ಕೆ. ಅಚ್ಚುಕಟ್ಟು ಬಳಿಯ ಇಂದಿರಾ ಕ್ಯಾಂಟೀನ್ ಬಳಿ ದೀಪಾ ಮತ್ತು ಅವರ ಮಗಳು ಹಿಷಿತಾ ಎಂಬುವರು ಬೈಕ್​​ನಲ್ಲಿ ಬರುತ್ತಿದ್ದಾಗ ಮತ್ತೊಂದು ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಸಾರ್ವಜನಿಕರು ರಕ್ಷಣೆಗೆ ಬಂದ ಹಿನ್ನೆಲೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಾಯಿ -ಮಗಳ ಕೊಲೆ ಯತ್ನ... ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

ಪ್ರಕರಣದ ಹಿನ್ನೆಲೆ:ದೀಪಾ ಅವರು ಶ್ರೀಕುಮಾರ್ ಎಂಬುವರನ್ನ ಎರಡನೇ ಮದುವೆಯಾಗಿದ್ದರು. ಶ್ರೀಕುಮಾರ್ ಮೊದಲನೇ ಹೆಂಡತಿ ಜಯಂತಿ, ಮಗಳು ಮೊನಿಷಾ, ಅಳಿಯ ನವೀನ್​ಗೆ ಈ ವಿಚಾರ ಮೊದಲು ಗೊತ್ತಿರಲಿಲ್ಲ. ನಂತರ ಗೊತ್ತಾಗಿ ದೊಡ್ಡ ರಂಪಾಟ ಮಾಡಿದ್ದರು ಎನ್ನಲಾಗ್ತಿದೆ. ಸದ್ಯ ಇವರೇ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಶ್ರೀಕುಮಾರ್ ಖಾಸಗಿ ಸ್ಕೂಲ್ ಸಂಸ್ಥಾಪಕನಾಗಿದ್ದು, ಪತಿ-ಪತ್ನಿಯರ ನಡುವಿನ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿದೆ. ಕೊಲೆ ಯತ್ನದ ಪ್ರಕರಣ ಸಿ.ಕೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದೆ.

ABOUT THE AUTHOR

...view details