ಕರ್ನಾಟಕ

karnataka

ETV Bharat / jagte-raho

ಶಿರಸಿ ನಗರಸಭೆ ಸದಸ್ಯನ ಮೇಲೆ ಪೊಕ್ಸೋ ಪ್ರಕರಣ: ಆರೋಪಿಗಾಗಿ ಹುಡುಕಾಟ - ಪೊಕ್ಸೋ ಕಾಯ್ದೆಯಡಿ ಪ್ರಕರಣ

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಶಿರಸಿ ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯ ಯಶವಂತ ಮರಾಠೆ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Poxo case against Shirasi municipality member accused
ಶಿರಸಿ ನಗರಸಭೆ ಸದಸ್ಯನ ಮೇಲೆ ಪೊಕ್ಸೋ ಪ್ರಕರಣ: ಆರೋಪಿಗಾಗಿ ಹುಡುಕಾಟ

By

Published : Jun 5, 2020, 12:46 AM IST

ಶಿರಸಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ನಗರಸಭೆ ಸದಸ್ಯನ ಮೇಲೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಿರಸಿ ನಗರಸಭೆ ಸದಸ್ಯನ ಮೇಲೆ ಪೊಕ್ಸೋ ಪ್ರಕರಣ: ಆರೋಪಿಗಾಗಿ ಹುಡುಕಾಟ

ಶಿರಸಿ ನಗರಸಭೆ ವಾರ್ಡ ನಂ. 27 ರ ಸದಸ್ಯ, ಇಲ್ಲಿನ ಕೆ.ಇ.ಬಿ. ಹತ್ತಿರದ ಮಾರುತಿ ಗಲ್ಲಿಯ ಯಶವಂತ ಹನುಂತಪ್ಪ ಮರಾಠೆ (43) ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಶಿರಸಿ ನಗರದ ಸಮೀಪದ ಗ್ರಾಮವೊಂದರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿರುವುದಾಗಿ ನೊಂದ ಬಾಲಕಿಯೇ ದೂರು ನೀಡಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮೇ.4 ರಂದು ಮಧ್ಯಾಹ್ನ 2.30 ರಿಂದ 3.30 ರ ವೇಳೆಯಲ್ಲಿ ಬಾಲಕಿಯ ಮನೆಗೆ ಬಂದು ಮದುವೆಯಾಗುವುದಾಗಿ ಪುಸಲಾಯಿಸಿ, ಕೂಗಬೇಡ ಎಂದು ಹೆದರಿಸಿ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ದೂರು ನೀಡಿದ್ದಾಗಿ ತಿಳಿದು ಬಂದಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details