ಆಗ್ರಾ (ಉತ್ತರ ಪ್ರದೇಶ): ಬಂದೂಕು ಹಿಡಿದು ಬಂದ ಅಪರಿಚಿತ ವ್ಯಕ್ತಿಗಳು ರೈತನೋರ್ವನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆಗ್ರಾ: ಹೊಲ ಕಾಯಲು ಹೋಗಿದ್ದ ರೈತನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - ಆಗ್ರಾ ಕ್ರೈಂ ಸುದ್ದಿ
ಹೊಲದಲ್ಲಿ ಮಲಗಿದ್ದ ರೈತನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆಗ್ರಾದಲ್ಲಿ ರೈತನ ಗುಂಡಿಕ್ಕಿ ಹತ್ಯೆ
ಮಹೇಂದ್ರ ಸಿಂಗ್ ಮೃತ ರೈತ. ಮಹೇಂದ್ರ ಸಿಂಗ್ ನಿನ್ನೆ ರಾತ್ರಿ ಹೊಲ ಕಾಯುತ್ತಾ ಅಲ್ಲೇ ಮಲಗಿದ್ದರು. ಇಂದು ಬೆಳಗ್ಗೆ ಚಹಾ ತೆಗೆದುಕೊಂಡು ಮಗ ಅನಿಲ್ ಹೊಲಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ನೋಡಿದ್ದಾರೆ. ತಕ್ಷಣವೇ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ದುಷ್ಕರ್ಮಿಗಳು ಗುಂಡು ಹಾರಿಸಿ ಸಾಯಿಸಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.