ಕರ್ನಾಟಕ

karnataka

ETV Bharat / jagte-raho

ಗೋಲ್ಡ್​ ಪಾಲಿಷ್​ಗೂ ಮುನ್ನ ಇರಲಿ ಎಚ್ಚರ! ಚಿನ್ನ ಪಾಲಿಷ್​ ಸೋಗಿನಲ್ಲಿ ಆಭರಣ ಕಳವು - ಗೋಲ್ಡ್ ಪಾಲಿಷ್ ಕೇಸ್​

ಚಿನ್ನ ಪಾಲಿಷ್‌ ಮಾಡುವವರ ಸೋಗಿನಲ್ಲಿ ಮನೆಗೆ ಬಂದ ಖದೀಮರು, ಗಮನ ಬೇರೆಡೆ ಸೆಳೆದು ಮಹಿಳೆಯ ಸರ ಕಸಿದ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕತ್ರಿಗುಪ್ಪೆಯ ಉಷಾ ಎಂಬುವವರು ಸರ ಕಳೆದುಕೊಂಡಿದ್ದಾರೆ.

jewelry stolen
ಚಿನ್ನ ಕಳವು

By

Published : Dec 11, 2020, 4:12 AM IST

ಬೆಂಗಳೂರು:ಚಿನ್ನ ಪಾಲಿಷ್‌ ಮಾಡುವವರ ಸೋಗಿನಲ್ಲಿ ಮನೆಗೆ ಬಂದ ಖದೀಮರು, ಮಹಿಳೆಯನ್ನು ಯಾಮಾರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕತ್ರಿಗುಪ್ಪೆಯಲ್ಲಿ ನಡೆದಿದೆ.

ಗಮನ ಬೇರೆಡೆ ಸೆಳೆದು ಮಹಿಳೆಯ ಸರ ಕಸಿದ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕತ್ರಿಗುಪ್ಪೆಯ ಉಷಾ ಎಂಬುವವರು ಸರ ಕಳೆದುಕೊಂಡಿದ್ದಾರೆ.

ಉಷಾ ತಮ್ಮ ‍ಚಿನ್ನಾಭರಣ ಪಾಲಿಷ್​ ಮಾಡಿಸಬೇಕು ಅಂದುಕೊಂಡಿದ್ದರು. ಡಿಸೆಂಬರ್ 6ರಂದು ಉಷಾ ಅವರ ಮನೆಗೆ ಬಂದ ಆರೋಪಿಗಳು, 'ಕಡಿಮೆ ದರಕ್ಕೆ ಚಿನ್ನಾಭರಣ ಪಾಲಿಷ್ ಮಾಡುತ್ತೇವೆ' ಎಂದಿದ್ದಾರೆ. ಖದೀಮರ ಮಾತಿಗೆ ಮರುಳಾದ ಉಷಾ, ಎರಡು ಉಂಗುರ ಹಾಗೂ ಒಂದು ಮಾಂಗಲ್ಯ ಸರ ಸೇರಿ 30 ಗ್ರಾಂ. ಚಿನ್ನಾಭರಣ ಆರೋಪಿಗಳ ಕೈಗೆ ನೀಡಿದ್ದಾರೆ.

26 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್​ ಜಿಲ್ಲಾ ಖದೀಮ ಸೆರೆ

ಚಿನ್ನಾಭರಣ ಪಡೆದ ಆರೋಪಿಗಳು ಪಾತ್ರೆಯಲ್ಲಿ ನೀರು ಹಾಕಿ ನಂತರ ಅರಿಶಿಣದ ಪುಡಿ ಬೇರಸಿದ್ದಾರೆ. 'ಹತ್ತು ನಿಮಿಷ ಬಿಟ್ಟು ಪಾತ್ರೆ ತೆಗೆದು ನೋಡಿ ಒಡವೆ ಪಾಲಿಷ್​ ಆಗಿರುತ್ತವೆ' ಎಂದಿದ್ದಾರೆ. ಇದೇ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಆಭರಣ ದೋಚಿ ಪರಾರಿ ಆಗಿದ್ದಾರೆ. ಕೆಲ ಹೊತ್ತಿನ ಬಳಿಕ‌ ಪಾತ್ರೆಯಲ್ಲಿ ನೋಡಿದಾಗ ಸರ ಇಲ್ಲದಿರುವುದು ಕಂಡು ಮೋಸ ಹೋಗಿರುವುದು ಮಹಿಳೆಯ ಗಮನಕ್ಕೆ ಬಂದಿದೆ.

ಕತ್ರಿಗುಪ್ಪೆ, ಹನುಮಂತನಗರ ಮತ್ತು ಶ್ರೀನಿವಾಸ ನಗರ ಸುತ್ತಮುತ್ತ ಲಾಕ್​ಡೌನ್ ತೆರವಿನ ನಂತರ ಕಳವು ಪ್ರಕರಣಗಳು ಹೆಚಾಗುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಇದೇ ರಸ್ತೆಯಲ್ಲಿ‌ ನಿಲ್ಲಿಸಿದ್ದ ವಾಹನಗಳ ಕಳ್ಳತನ ಆಗಿದ್ದವು. ತಡರಾತ್ರಿ ಬರುವ ಕಳ್ಳರು, ಏರಿಯಾದ ಬೀದಿ ದೀಪಗಳನ್ನು ಆರಿಸಿ ತಮ್ಮ ಕಳ್ಳತನದ ಕೈ ಚಳಕ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಿನ್ನಾಭರಣ ದೋಚಿದ ಸಂಬಂಧ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆಬೀಸಿದ್ದಾರೆ.

ABOUT THE AUTHOR

...view details