ಕರ್ನಾಟಕ

karnataka

ETV Bharat / jagte-raho

ಇವನು ಖಾಕಿ ಕಾಮುಕ..- ಆರು ವರ್ಷದ ಬಾಲೆ ಮೇಲೆ ಪೊಲೀಸ್​ ಪೇದೆಯಿಂದ ಅತ್ಯಾಚಾರ! - ಪೇದೆಯ ಹೆಂಡತಿ

ಈಗಾಗಲೇ ಆರೋಪಿ ಬಂಧನ ಮಾಡಲಾಗಿದ್ದು, ಸೆಕ್ಷನ್​(376) ರೇಪ್​,ಹಾಗೂ (506) ಕ್ರಿಮಿನಲ್​ ಕೃತ್ಯದ ಆರೋಪ ಹಾಗೂ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.

ಸಂಗ್ರಹ ಚಿತ್ರ

By

Published : Apr 3, 2019, 4:44 PM IST

ರಾಯಘಡ್:ಪೊಲೀಸ್​ ಪೇದೆಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದಿರುವ ಘಟನೆ ಛತ್ತೀಸ್‌ಘಡ್ ರಾಜ್ಯದ ರಾಯಘಡ್​ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್​​ 29ರಂದು ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಆದರೆ, ಈ ಘಟನೆ ಪೊಲೀಸ್​ ಪೇದೆಯ ಮನೆಯಲ್ಲಿ ನಡೆದ ಕಾರಣ, ಕೃತ್ಯವೆಸಗಿರುವುದನ್ನ ನೋಡಿರುವ 45 ವರ್ಷದ ಪೊಲೀಸ್​ ಪೇದೆಯ ಹೆಂಡತಿಯೇ ದೂರು ದಾಖಲು ಮಾಡಿದ್ದಾಳೆ.

ಈಗಾಗಲೇ ಆರೋಪಿ ಬಂಧನ ಮಾಡಲಾಗಿದ್ದು, ಸೆಕ್ಷನ್​(376) ರೇಪ್​,ಹಾಗೂ (506) ಕ್ರಿಮಿನಲ್​ ಕೃತ್ಯದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಇದರ ಜತೆಗೆ ಪೋಕ್ಸೊ ಕಾಯ್ದೆಯಡಿ ಕೂಡ ದೂರು ದಾಖಲಾಗಿದೆ.

ಆರೋಪಿಯನ್ನ ಈಗಾಗಲೇ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, 14ದಿನದ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ರಾಜೇಶ್​ ಅಗರವಾಲ್​ ತಿಳಿಸಿದ್ದಾರೆ.

ABOUT THE AUTHOR

...view details