ಶಿವಮೊಗ್ಗ: ಎರಡು ಪ್ರತ್ಯೇಕ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 2,78,050 ಲಕ್ಷ ರೂ. ಹಾಗೂ 13 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ: ಪ್ರತ್ಯೇಕ ಪ್ರಕರಣ ಇಸ್ಪೀಟ್ ಅಡ್ಡೆ ಮೇಲೆ ದಾಳಿ, 2.78 ಲಕ್ಷ ರೂ. ವಶ - ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಷನ್ ಕಾಂಪೋಡ್
ಶಿವಮೊಗ್ಗ ನಗರದಲ್ಲಿ ಎರಡು ಪ್ರತ್ಯೇಕ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 2,78,050 ಲಕ್ಷ ರೂ. ಹಾಗೂ 13 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ: ಪ್ರತ್ಯೇಕ ಪ್ರಕರಣ ಇಸ್ಪೀಟ್ ಅಡ್ಡೆ ಮೇಲೆ ದಾಳಿ, 2.78 ಲಕ್ಷ ರೂ. ವಶ
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಷನ್ ಕಾಂಪೌಂಡ್ ನಲ್ಲಿ ಇಸ್ಪೀಟ್ ಆಡುವಾಗ ಸಿಪಿಐ ವಸಂತ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, 26.500 ರೂ.ಗಳನ್ನು ಹಾಗೂ 6 ಜನರನ್ನ ವಶಕ್ಕೆ ಪಡೆದಿದ್ದಾರೆ.
ಅದೇ ರೀತಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಕಾಂಪ್ಲೆಕ್ಸ್ ನ ಶ್ರೀರಂಗ ಬಿಲ್ಡಿಂಗ್ ಇಸ್ಪೀಟ್ ಅಡ್ಡೆ ಮೇಲೆ ವಿನೋಬನಗರ ಪಿಎಸ್ಐ ಉಮೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, 2,51,550 ರೂ.ಗಳನ್ನು ಹಾಗೂ 7 ಜನರನ್ನು ವಶಕ್ಕೆ ಪಡೆಯಲಾಗಿದೆ.