ಭಾವ್ನಗರ್:ಪೊಲೀಸ್ ಪೇದೆಯೊಬ್ಬರು ತನ್ನ ಮೂವರು ಮಕ್ಕಳನ್ನು ಕೊಚ್ಚಿ ಕೊಂದಿರುವ ಘಟನೆ ಭಾವ್ನಗರ್ದಲ್ಲಿ ನಡೆದಿದೆ.
ತನ್ನ ಮುದ್ದಾದ ಮೂರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ-ಕೊಚ್ಚಿ ಕೊಂದ ಪೊಲೀಸಪ್ಪ! - ಭಾವ್ನಗರ ಪೊಲೀಸಪ್ಪ ಮೂರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಸುದ್ದಿ
ಮುದ್ದಾದ ಮೂರು ಮಕ್ಕಳನ್ನು ಪೊಲೀಸ್ ಪೇದೆಯೊಬ್ಬರು ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಇಡೀ ಗುಜರಾತ್‌ನ ಬೆಚ್ಚಿ ಬೀಳಿಸಿದೆ.
ಮೂರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ-ಕೊಚ್ಚಿ ಕೊಂದ ಪೊಲೀಸಪ್ಪ
ಸಿಟ್ಟಿಗೆದ್ದು ತಮ್ಮ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿದ್ದಾರೆ ಪೊಲೀಸ್ ಪೇದೆ ಸುಖದೇವ್ ಷಿಯಾಲ್. ಬಳಿಕ ನೇರ ಪೊಲೀಸ್ ಠಾಣೆಗೆ ಫೋನ್ ಮಾಡಿ ಸುದ್ದಿ ತಿಳಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೃತ ಮಕ್ಕಳ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಕುರಿತು ಭಾವಾನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.