ಕರ್ನಾಟಕ

karnataka

ETV Bharat / jagte-raho

ಕಳವು ಮಾಡಿದ್ದು ಎರಡು ಆಡು...ಪೊಲೀಸರು ಹಿಡಿದಾಗ ಸಿಕ್ಕಿದ್ದು ನಾಲ್ಕು ಮೇಕೆ ! - uppinangady police

ಆರೋಪಿಗಳು ಆಡುಗಳನ್ನು ಕಳವು ಮಾಡುವ ಸಂದರ್ಭದಲ್ಲಿ ಇವುಗಳ ಪೈಕಿ ಹೆಣ್ಣು ಆಡು ತುಂಬು ಗರ್ಭಿಣಿಯಾಗಿತ್ತು. ಕಳವು ಮಾಡಿದ ನಂತರ ಅದು ಎರಡು ಮರಿಗಳಿಗೆ ಜನ್ಮ ನೀಡಿತ್ತು.

robbers
robbers

By

Published : Oct 16, 2020, 3:59 PM IST

Updated : Oct 16, 2020, 5:18 PM IST

ಉಪ್ಪಿನಂಗಡಿ (ದ.ಕ):ಮೇಯಲು ಬಿಟ್ಟ ಆಡುಗಳನ್ನು ಕಳವು ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಆಡುಗಳನ್ನು ಮತ್ತು ಕಳವಿಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕಡವಿನಬಾಗಿಲು ಎಂಬಲ್ಲಿ ಉಮ್ಮರ್ ಫಾರೂಕ್ ಅವರು ಸಾಕುತ್ತಿದ್ದ ಗಂಡು ಮತ್ತು ಹೆಣ್ಣು ಆಡುಗಳನ್ನು ಮೇಯಲು ಬಿಟ್ಟ ಸಮಯದಲ್ಲಿ ಕಳವು ಮಾಡಲಾಗಿತ್ತು. ಈ ಬಗ್ಗೆ ಫಾರೂಕ್ ದೂರು ದಾಖಲಿಸಿದ್ದರು.

ಕುಪ್ಪೆಟ್ಟಿ ಬಳಿ ಡಸ್ಟರ್ ಕಾರಿನಲ್ಲಿ ಆಡುಗಳನ್ನು ಸಾಗಿಸುವ ಯತ್ನದಲ್ಲಿದ್ದ ನೆಕ್ಕಿಲಾಡಿಯ ಸಿನಾನ್ (19) ಹಾಗೂ ನಿಜಾಮುದ್ದೀನ್ (18) ಮತ್ತು ಇಳಂತಿಲ ಗ್ರಾಮದ ರಿಯಾಜ್​​ (21) ಎಂಬವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಆಡುಗಳನ್ನು ಹಾಗೂ ಸಾಗಣೆಗೆ ಬಳಸಿದ ಡಸ್ಟರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಆಡುಗಳನ್ನು ಕಳವು ಮಾಡುವ ಸಂದರ್ಭದಲ್ಲಿ ಇವುಗಳ ಪೈಕಿ ಹೆಣ್ಣು ಆಡು ತುಂಬು ಗರ್ಭಿಣಿಯಾಗಿತ್ತು. ಕಳವು ಮಾಡಿದ ನಂತರ ಅದು ಎರಡು ಮರಿಗಳಿಗೆ ಜನ್ಮ ನೀಡಿತ್ತು.

Last Updated : Oct 16, 2020, 5:18 PM IST

ABOUT THE AUTHOR

...view details