ಬೆಂಗಳೂರು:ನಕಲಿ ನೋಟು ತಯಾರಿಸುತ್ತಿದ್ದ ಓರ್ವ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಪಾದರಾಯನಪುರ ನಿವಾಸಿ ಗುಂಡು ಅಲಿಯಾಸ್ ಇಮ್ರಾನ್ ಬಂಧಿತ ವ್ಯಕ್ತಿ. ಈತನಿಂದ ನಕಲಿ ನೋಟು ತಯಾರು ಮಾಡುವ ಯಂತ್ರ, ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಂದು ಮಧ್ಯಾಹ್ನ ಸಿ.ಟಿ.ಮಾರ್ಕೆಟ್‌ನಿಂದ ಶಾಂತಿ ನಗರಕ್ಕೆ ಹೋಗಲು ಇಮ್ರಾನ್ ಆಟೋ ಹತ್ತಿದ್ದಾನೆ. ಶಾಂತಿನಗರದಲ್ಲಿ ಇಳಿದು ಬಾಡಿಗೆ ರೂಪವಾಗಿ 100 ರೂ. ನೀಡಿದ್ದಾನೆ. ಹಣ ಪಡೆದ ಆಟೋ ಚಾಲಕ ಖೋಟಾ ನೋಟು ಎಂದು ಖಾತ್ರಿಪಡಿಸಿಕೊಂಡು ನೇರವಾಗಿ ಇಮ್ರಾನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾನೆ.
ಓದಿ: ಬ್ರಿಟನ್ನಿಂದ ಬಂದ 151 ಪ್ರಯಾಣಿಕರು ನಾಟ್ ರೀಚಬಲ್, ಹುಡುಕಾಟದಲ್ಲಿ ಬಿಬಿಎಂಪಿ..!
ಆರೋಪಿಯ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡ ಪೊಲೀಸರು ಆತನಿಂದ ಖೋಟಾನೋಟು ತಯಾರಿಸುವ ಯಂತ್ರವನ್ನು ಜಪ್ತಿ ಮಾಡಿದ್ದಾರೆ. ಈತ 200 ಹಾಗೂ 2,000 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ನಗರದ ನಾಲ್ಕು ಕಡೆಗಳಲ್ಲಿ ನೋಟು ತಯಾರು ಮಾಡ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.